varthabharthi

ಕರಾವಳಿ

ವಿಟ್ಲ-ಉಕ್ಕುಡ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ವಾರ್ತಾ ಭಾರತಿ : 7 Dec, 2017

ವಿಟ್ಲ, ಡಿ.7: ಮನೆಯೊಂದಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರದ ಕಳವುಗೈದ ಘಟನೆ ಇಲ್ಲಿಗೆ ಸಮೀಪದ ಉಕ್ಕುಡ ಎಂಬಲ್ಲಿ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಉಕ್ಕುಡ ಚೆಕ್ ಪೋಸ್ಟ್‌ನಿಂದ 100 ಮೀ. ದೂರದಲ್ಲಿರುವ ಉಕ್ಕುಡದ ಅಬ್ಬಾಸ್ ಹಾಜಿ ಎಂಬವರ ಮನೆಯಿಂದ ಈ ಕಳ್ಳತನ ನಡೆದಿದೆ. ಸುಮಾರು 10.5 ಲಕ್ಷ ರೂ. ಮೌಲ್ಯದ 44 ಪವನ್ ಚಿನ್ನಾಭರಣವನ್ನು ಕಳವುಗೈಯಲಾಗಿದೆ.

 ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಕಳ್ಳತನ ನಡೆದಿದೆ. ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಮನೆಯೊಳಗಡೆ ಅಕ್ಕಿಯೊಳಗೆ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ಪತ್ತೆಹಚ್ಚಿ ದೋಚಿದ್ದಾರೆ. ಇದೇ ವೇಳೆ ಮನೆಯ ಕಪಾಟು ಸೇರಿದಂತೆ ಎಲ್ಲೂ ಕೂಡಾ ಕಳ್ಳರು ಕಳವಿಗಾಗಿ ಹುಡುಕಾಟ ನಡೆಸಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಪರಿಚಿತರ ಕೃತ್ಯವಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಬಂಟ್ವಾಳ ವೃತ್ತ ನಿರಿಕ್ಷಕ ಪ್ರಕಾಶ್, ವಿಟ್ಲ ಎಸ್ಸೈ ನಾಗರಾಜ್ ಮತ್ತು ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
 ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

 

Comments (Click here to Expand)