varthabharthi

ಕರ್ನಾಟಕ

17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ವಾರ್ತಾ ಭಾರತಿ : 7 Dec, 2017

ತುಮಕೂರು, ಡಿ.7:  17  ವರ್ಷದ ಬಾಲಕಿಯ ಮೇಲೆ ಐವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತುಮಕೂರಿನ ಯಲ್ಲಾಪುರದಲ್ಲಿ ನಡೆದಿದೆ. 

ಯಲ್ಲಾಪುರ, ಅಂತರಸನಹಳ್ಳಿ, ತಿಮ್ಲಾಪುರ ಗ್ರಾಮದ ಹರೀಶ್, ಮಧು, ಕೇಶವ್, ಚಿದಾನಂದ ಹಾಗು ಚಂದು ಆರೋಪಿಗಳು ಎಂದು ಗುರುತಿಸಲಾಗಿದೆ. ಯಲ್ಲಾಪುರದ ಪ್ಯಾಕ್ಟರಿಯೊಂದರಲ್ಲಿ ಬುಧವಾರ ರಾತ್ರಿ 17 ವರ್ಷದ ಬಾಲಕಿ ಮೇಲೆ ಈ ಐವರು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಹರೀಶ್ ಹಾಗೂ ಚಿದಾನಂದನನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)