ರಶ್ಯನ್ನರೊಂದಿಗೆ ಸಂಪರ್ಕ: ಟ್ರಂಪ್ ಮಗನ ವಿಚಾರಣೆ
ವಾಶಿಂಗ್ಟನ್, ಡಿ. 7: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ರ ತಂಡವು ರಶ್ಯದ ನೆರವನ್ನು ಪಡೆದುಕೊಂಡಿತ್ತು ಎಂಬ ಆರೋಪಗಳಿಗೆ ಸಂಬಂಧಿಸಿ ಟ್ರಂಪ್ರ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ರನ್ನು ಅಮೆರಿಕನ್ ಕಾಂಗ್ರೆಸ್ ಬುಧವಾರ ವಿಚಾರಣೆಗೊಳಪಡಿಸಿತು.
ಆದಾಗ್ಯೂ, 2016ರ ಜೂನ್ನಲ್ಲಿ ಟ್ರಂಪ್ ಸಹಾಯಕರು ಮತ್ತು ರಶ್ಯನ್ನರ ನಡುವೆ ನಡೆದ ಸಭೆಗೆ ಸಂಬಂಧಿಸಿದ ತನ್ನ ಇಮೇಲ್ಗಳ ಬಗ್ಗೆ ತಾನು ತಂದೆಯೊಂದಿಗೆ ನಡೆಸಿದ ಮಾತುಕತೆಯ ವಿವರಗಳನ್ನು ನೀಡಲು ಅವರು ನಿರಾಕರಿಸಿದರು ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಗುಪ್ತಚರ ಸಮಿತಿಯಲ್ಲಿರುವ ಡೆಮಾಕ್ರಟಿಕ್ ಸಂಸದ ಆ್ಯಡಂ ಶಿಫ್ ತಿಳಿಸಿದರು.
ವಿಚಾರಣೆಯ ವೇಳೆ, ಸಮಿತಿಯ ಸದಸ್ಯರು ಕೇಳಿದ ಹೆಚ್ಚಿನ ಪ್ರಶ್ನೆಗಳಿಗೆ ಜೂನಿಯರ್ ಟ್ರಂಪ್ ಉತ್ತರಿಸಿದರು ಎಂದರು.
Next Story