ಸಿರಿಯದಲ್ಲಿ ಐಸಿಸ್ ಸೋಲಿಸುವ ಗುರಿ ಸಂಪೂರ್ಣ: ರಶ್ಯ ಸೇನೆ
ಮಾಸ್ಕೊ, ಡಿ. 7: ಸಿರಿಯದಲ್ಲಿ ಐಸಿಸ್ನ್ನು ಸೋಲಿಸುವ ತನ್ನ ಗುರಿಯನ್ನು ಸಾಧಿಸಿರುವುದಾಗಿ ರಶ್ಯ ಸೇನೆ ಗುರುವಾರ ತಿಳಿಸಿದೆ. ಈಗ ಸಿರಿಯಲ್ಲಿ ಐಸಿಸ್ ನಿಯಂತ್ರಣದಲ್ಲಿ ಯಾವುದೇ ಊರುಗಳು ಉಳಿದಿಲ್ಲ ಎಂದಿದೆ.
‘‘ಅಭೂತಪೂರ್ವ ಪ್ರಮಾಣದಲ್ಲಿ ರಶ್ಯದ ವಾಯುಪಡೆಯನ್ನು ನಿಯೋಜಿಸುವ ಮೂಲಕ ಭಯೋತ್ಪಾದಕರನ್ನು ಸೋಲಿಸುವ ಅಂತಿಮ ಗುರಿಯನ್ನು ಸಾಧಿಸಲಾಗಿದೆ’’ ಎಂದು ರಶ್ಯದ ಜನರಲ್ ಕರ್ನಲ್ ಸರ್ಗಿ ರುಡ್ಸಕೊಯಿ ಹೇಳುವುದನ್ನು ಆ ದೇಶದ ‘ರೋಸಿಯ 24 ಟಿವಿ’ ಚಾನೆಲ್ ತೋರಿಸಿದೆ. ಅವರು ಸಿರಿಯದಲ್ಲಿ ರಶ್ಯ ಪಡೆಗಳು ಉಸ್ತುವಾರಿ ಹೊಂದಿದ್ದರು.
Next Story