varthabharthi

ಸಿನಿಮಾ

17 ವರ್ಷಗಳ ಬಳಿಕ ಮತ್ತೆ ಅನಿಲ್-ಮಾಧುರಿ ಜೋಡಿ

ವಾರ್ತಾ ಭಾರತಿ : 8 Dec, 2017

ಬೆಳ್ಳಿತೆರೆಯ ಸೂಪರ್‌ಹಿಟ್ ತಾರಾಜೋಡಿಗಳಾದ ಅನಿಲ್ ಕಪೂರ್ ಹಾಗೂ ಮಾಧುರಿ ದೀಕ್ಷಿತ್, ಬರೋಬ್ಬರಿ 17 ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ಮತ್ತೆ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಇಂದರ್‌ಕುಮಾರ್ ನಿರ್ದೇಶನದ ‘ಟೋಟಲ್ ಧಮಾಲ್’ನಲ್ಲಿ ಈ ಜನಪ್ರಿಯ ತಾರಾಜೋಡಿ ನಾಯಕ,ನಾಯಕಿಯರಾಗಿ ನಟಿಸುತ್ತಿದ್ದಾರೆ. 2000ನೇ ಇಸವಿಯಲ್ಲಿ ಬಿಡುಗಡೆ ಯಾದ ಪುಕಾರ್ ಚಿತ್ರದ ಬಳಿಕ ಇವರಿಬ್ಬರು ಮತ್ತೆ ಬೆಳ್ಳಿತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಅನಿಲ್-ಮಾಧುರಿ ತಾರಾಜೋಡಿ ಬೇಟಾ, ಪರಿಂದಾ, ತೇಝಾಬ್, ರಾಮ್‌ಲಖನ್‌ನಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿತ್ತು.

ಕಾಮಿಡಿಯಿಂದ ಕೂಡಿದ ಮನರಂಜನಾತ್ಮಕ ಚಿತ್ರವಾದ ‘ಟೋಟಲ್ ಧಮಾಲ್’ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲವೆಂದು ಮಾಧುರಿ ಹೇಳಿದ್ದಾರೆ. ಧಮಾಲ್ ಸರಣಿಯ ಮೂರನೇ ಕಂತಾಗಿರುವ ಈ ಚಿತ್ರದಲ್ಲಿ ಅಜಯ್‌ದೇವಗನ್, ರಿತೇಶ್ ದೇಶಮುಖ್, ಅರ್ಶದ್ ವಾರ್ಸಿ ಹಾಗೂ ಜಾವೇದ್ ಜಾಫ್ರಿ ಕೂಡಾ ನಟಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)