ಮುರುಗದಾಸ್ ಹಾಲಿವುಡ್ ರಿಮೇಕ್ಗೆ ಅಕ್ಷಯ್ ಹೀರೋ
ಅಕ್ಷಯ್ ಕುಮಾರ್
‘ಗಜನಿ’ ಖ್ಯಾತಿಯ ಮುರುಗದಾಸ್ ‘ಸ್ಪೈಡರ್’ ಚಿತ್ರದ ಬಳಿಕ ಮತ್ತೆ ಡೈರೆಕ್ಟರ್ಸೀಟ್ಗೆ ಮರಳಿದ್ದಾರೆ. ಹಾಲಿವುಡ್ನ ಮಿಲಿಯನ್ ಡಾಲರ್ ಬೇಬಿ ಚಿತ್ರವನ್ನು ಅವರು ಬಾಲಿವುಡ್ಗೆ ಭಟ್ಟಿಯಿಳಿಸಲಿದ್ದಾರೆ. ಮೂಲ ಚಿತ್ರದಲ್ಲಿ ಕ್ಲಿಂಟ್ ಈಸ್ಟ್ವುಡ್ ನಟಿಸಿದ್ದ ಪಾತ್ರವನ್ನು ಇಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರೆ. ಭಾರೀ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ರಿಮೇಕ್ ಚಿತ್ರದ ಮೂಲಕ ಕಿರುತೆರೆಯ ನಟಿ ಮರೀನಾ ಕುವಾರ್, ಬೆಳ್ಳಿತೆರೆಗೆ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ.
ಮರೀನಾ ಕುವಾರ್
ಮರೀನಾಗಂತೂ ಮುರುಗದಾಸ್, ಅಕ್ಷಯ್ಕುಮಾರ್ನಂತಹ ಅದ್ಭುತ ಪ್ರತಿಭೆಗಳು ಇರುವ ಚಿತ್ರದಲ್ಲಿ ಅವಕಾಶ ದೊರೆತಿರುವುದು ಇನ್ನಿಲ್ಲದ ಸಂತಸ ತಂದಿದೆ. ಖ್ಯಾತ ಟಿವಿ ಸರಣಿ ಸಿಐಡಿಯಲ್ಲಿ ನಟಿಸಿದ್ದ ಮರೀನಾ, ಬಿಗ್ಬಾಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಮುರುಗದಾಸ್ ಹಾಗೂ ಅಕ್ಷಯ್ ಒಟ್ಟಾಗಿರುವ ಎರಡನೆ ಚಿತ್ರ ಇದಾಗಿದೆ. ಈ ಮೊದಲು ಅಕ್ಷಯ್, ಮುರುಗದಾಸ್ ನಿರ್ದೇಶನದ ‘ಹಾಲಿಡೇ’ ಚಿತ್ರದಲ್ಲಿ ನಟಿಸಿದ್ದರು. ಮುರುಗದಾಸ್ ತಮಿಳು ಚಿತ್ರ ತುಪಾಕಿಯ ಬಾಲಿವುಡ್ ರಿಮೇಕ್ ಆಗಿರುವ ಹಾಲಿಡೇ ಗಲ್ಲಾಪೆಟ್ಟಿಗೆಯಲ್ಲೂ ಗೆಲುವು ಕಂಡಿತ್ತು.ಅಕ್ಷಯ್-ಮುರುಗದಾಸ್ ಕಾಂಬಿನೇಶನ್, ಈ ಚಿತ್ರದಲ್ಲೂ ಭರ್ಜರಿ ಯಶಸ್ಸು ದಾಖಲಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.