varthabharthi

ಸಿನಿಮಾ

ಶೀಘ್ರದಲ್ಲಿ ಬರಲಿದೆ 'ಮಂತ್ರಂ 2'

ವಾರ್ತಾ ಭಾರತಿ : 8 Dec, 2017
ಶಶಿಕರ ಪಾತೂರು

ಅಮರ್ ಚೌದರಿ ತಮ್ಮ  ನಿರ್ಮಾಣದ 'ಮಂತ್ರಂ' ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಅವರು ಚಿತ್ರದ ಎರಡನೇ ಭಾಗ ಶುರು ಮಾಡುತ್ತಿರುವುದಾಗಿ ತಿಳಿಸಲು ಪತ್ರಿಕಾಗೋಷ್ಠಿ ಕರೆದು ಮಾತನಾಡುತ್ತಿದ್ದರು.

ಮಂತ್ರಂ 2 ಕ್ಲಾಸ್ ಆಗಿರುತ್ತದೆ. ಪ್ರಥಮ ಭಾದಲ್ಲಿಯೂ ಹಾರರ್ ಅಂಶವನ್ನು ಪ್ರೇಕ್ಷಕರನ್ನು ಆಕರ್ಷಿಸಲು  ಮಾತ್ರ ಸೇರಿಸಿದ್ದೆವು. ಚಿತ್ರದ ಕೊನೆಯಲ್ಲಿ ನೈಜತೆಗೆ ಹತ್ತಿರವಾಗಿ ಮೆಸೇಜ್ ಇತ್ತು ಎಂದು ಅವರು ಅಭಿಪ್ರಾಯ ಪಟ್ಟರು.

ಚಿತ್ರದ ನಾಯಕ ಶಮನ್ ಶೆಟ್ಟಿ ಮಾತನಾಡಿ, "ಮೊದಲ ಚಿತ್ರದಲ್ಲಿ ದೆವ್ವವಾಗಿದ್ದ ನಾನು ಮಂತ್ರ 2ನಲ್ಲಿ ಬದಲಾಗಿರುತ್ತೇನೆ" ಎಂಬ ಮಾಹಿತಿ ನೀಡಿದರು. ನಟಿ ಪಲ್ಲವಿ ರಾಜು ಮಾತನಾಡಿ, ನಾಯಕಿಯಾದ ಪ್ರಥಮ ಚಿತ್ರವೇ ನಿರೀಕ್ಷೆಗಿಂತ ಹೆಚ್ಚು ರೀಚ್ ಆಗಲು ಸಾಧ್ಯವಾಗಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿದರು.

ನವರಸನ್ ಚಿತ್ರವನ್ನು ‌ವಿತರಣೆ ಮಾಡಿದ್ದು, ಆರಂಭದಲ್ಲಿ ಸೇಠುಗಳೇನೋ ಚಿತ್ರ ಸುಮ್ಸುಮ್ನೇ ಒಂದು‌ ಚಿತ್ರ ಮಾಡಿದ್ದಾರೆ ಎಂದುಕೊಂಡಿದ್ದೆ. ಆದರೆ ನನಗೆ ಚಿತ್ರ ನೋಡಿದಾಗ ಅವರ ಪ್ಯಾಶನ್ ಅರ್ಥವಾಗಿತ್ತು. ಚಿತ್ರವನ್ನು 12 ಮಲ್ಟಿಪ್ಲೆಕ್ಸ್ ಮತ್ತು 56 ಸಿಂಗಲ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದೆ. ಮಫ್ತಿಯಂಥ ದೊಡ್ಡ ಚಿತ್ರದೆದುರು 'ಮಂತ್ರಂ' ಒಳ್ಳೆಯ ಕಲೆಕ್ಷನ್ ಮಾಡಿತ್ತು. ಚಿತ್ರದ ಸೆಕೆಂಡ್ ಹಾಫ್ ಚೆನ್ನಾಗಿತ್ತು. ಅದೇ ಕಾರಣಕ್ಕೆ ಎರಡನೇ ಭಾಗ ಸೆಕೆಂಡ್ ಹಾಫ್ ನಂತೆ ಇರುತ್ತದೆ. ಈಗಾಗಲೇ ಚಿತ್ರದ ಹಿಂದಿ ರೈಟ್ಸ್ 30 ಲಕ್ಷ ಮತ್ತು ತೆಲುಗು ರೈಟ್ಸ್ 13 ಲಕ್ಷಕ್ಕೆ ಮಾತುಕತೆಯಾಗಿದೆ. ಚಿತ್ರ ಇನ್ನೂ ಎರಡು ವಾರ ಓಡಿದರೆ ನಿರ್ಮಾಪಕರು ಸೇಫ್ ಆಗುತ್ತಾರೆ ಎಂದು ನವರಸನ್ ಹೇಳಿದರು.

ಇದೇ ಸಂದರ್ಭ ತಮ್ಮ ಚಿತ್ರ ಸೇರಿದಂತೆ ಬಹಳಷ್ಟು ಕನ್ನಡ ಚಿತ್ರಗಳಿಗೆ ಅನಗತ್ಯವಾಗಿ ಎ ಸರ್ಟಿಫಿಕೆಟ್ ನೀಡುತ್ತಿರುವುದನ್ನು ಖಂಡಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)