varthabharthi

ಸಿನಿಮಾ

ಅನನ್ಯ ಹೀರೋಯಿನ್

ವಾರ್ತಾ ಭಾರತಿ : 8 Dec, 2017

ವರುಣ್ ಧವನ್, ಸಿದ್ಧಾರ್ಥ ಮಲ್ಹೋತ್ರಾ, ಆಲಿಯಾ ಭಟ್ ಮತ್ತಿತರ ಪ್ರತಿಭಾವಂತ ತಾರೆಯರನ್ನು ಬಾಲಿವುಡ್‌ಗೆ ಪರಿಚಯಿಸಿದ ಕರಣ್ ಜೋಹರ್ ಅವರ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಎರಡನೆ ಭಾಗ ತಯಾರಾಗಲಿದೆಯೆಂಬ ಸುದ್ದಿ ಹಲವು ಸಮಯದಿಂದ ಕೇಳಿಬರುತ್ತಿದ್ದಾದರೂ, ಇದೀಗ ಅದು ಕನ್‌ಫರ್ಮ್ ಆಗಿದೆ. ಇದರ ಬೆನ್ನಲ್ಲೇ ಚಿತ್ರದ ನಾಯಕ, ನಾಯಕಿ ಯಾರಿರಬಹುದೆಂಬ ಬಗ್ಗೆ ಚರ್ಚೆಯೂ ಶುರುಹಚ್ಚಿಕೊಂಡಿದೆ.

ಬಾಲಿವುಡ್‌ನ ಒಂದು ಕಾಲದ ಖ್ಯಾತ ನಟಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್ ಅಥವಾ ಸೈಫ್ ಅಲಿ ಖಾನ್ ಪುತ್ರಿ ಸಾರಾ ಇವರಿಬ್ಬರಲ್ಲಿ ಒಬ್ಬರು ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಲಿದ್ದಾರೆಂಬ ಮಾತುಗಳು ಬಿಟೌನ್‌ನಲ್ಲಿ ದಟ್ಟವಾಗಿ ಕೇಳಿಬಂದಿದ್ದವು. ಆದರೆ ಇದೀಗ ಬಾಲಿವುಡ್‌ನ ಜನಪ್ರಿಯ ನಟನಾಗಿದ್ದ ಚಂಕಿಪಾಂಡೆಯ ಪುತ್ರಿ ಆನನ್ಯ ಪಾಂಡೆ, ‘ಎಸ್‌ಒವೈ 2’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಕಳೆದ ವಾರ ನಡೆದ ಚಿತ್ರದ ಕಲಾವಿದರ ಅಡಿಶನ್‌ನಲ್ಲಿ ಅನನ್ಯ ಪಾಲ್ಗೊಂಡಿದ್ದಳು. ಆಡಿಶನ್‌ನಲ್ಲಿ ಚಿತ್ರದ ನಿರ್ದೇಶಕ ಪುನೀತ್ ಮಲ್ಹೋತ್ರಾ, ನಾಯಕ ನಟ ಟೈಗರ್ ಶ್ರಾಫ್‌ತ ಹಾಗೂ ನಿರ್ಮಾಪಕ ಕರಣ್ ಜೋಹರ್ ಪಾಲ್ಗೊಂಡಿದ್ದರು. ಸ್ಟೂಡೆಂಟ್ ಆಫ್ ಇಯರ್ ಚಿತ್ರದ ಮೊದಲ ಭಾಗದಲ್ಲಿ ಅಲಿಯಾ ಭಟ್ ಹೇಳಿದ್ದ ಡೈಲಾಗನ್ನು ಅನನ್ಯ ನಿರಾಯಾಸವಾಗಿ ಹೇಳಿದ್ದೇ ತಡ, ನಿರ್ದೇಶಕರು ಮರುಮಾತಿಲ್ಲದ ಆಕೆಯನ್ನು ನಾಯಕಿಯಾಗಿ ಫೈನಲೈಸ್ ಮಾಡಿದ್ದಾರೆ. ಅಂತೂ ಬಾಲಿವುಡ್‌ನಲ್ಲಿ ಹೊಸ ತಾರೆಯೊಂದು ಉದಯಿಸಿದೆ. ಬೆಸ್ಟ್ ಆಫ್ ಲಕ್ ಆನನ್ಯ...

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)