ಯಮನ್: ಸೌದಿ ನೇತೃತ್ವದ ದಾಳಿಯಲ್ಲಿ 23 ನಾಗರಿಕರ ಸಾವು
ಸನಾ (ಯಮನ್), ಡಿ. 9: ಯಮನ್ನ ಉತ್ತರ ಭಾಗದಲ್ಲಿ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ನಡೆಸಿದ ವಾಯು ದಾಳಿಗಳಲ್ಲಿ ಕನಿಷ್ಠ 23 ನಾಗರಿಕರು ಮೃತಪಟ್ಟಿದ್ದಾರೆ ಎಂದು ಯಮನ್ ಅಧಿಕಾರಿಗಳು ಹೇಳಿದ್ದಾರೆ.
ಸಾಡ ನಗರದ ವಿವಿಧ ಭಾಗಗಳಲ್ಲಿ ಶುಕ್ರವಾರ ವಾಯು ದಾಳಿಗಳು ನಡೆದವು ಎಂದು ನಗರದ ಆರೋಗ್ಯ ಇಲಾಖೆಯ ಮುಖ್ಯಸ್ಥರು ತಿಳಿಸಿದರು.
ಸಾಡ ನಗರವು ಇರಾನ್ ಬೆಂಬಲಿತ ಶಿಯಾ ಹೌದಿ ಬಂಡುಕೋರರ ಭದ್ರಕೋಟೆಯಾಗಿದೆ.
ಯಮನ್ನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರವನ್ನು ರಕ್ಷಿಸುವುದಕ್ಕಾಗಿ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು 2015 ಮಾರ್ಚ್ನಿಂದ ಹೌದಿ ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿವೆ.
Next Story