ಬೆಲ್ಜಿಯಂಗೆ ಐದನೇ ಸ್ಥಾನ
ಹಾಕಿ ವರ್ಲ್ಡ್ ಲೀಗ್ ಫೈನಲ್
ಭುವನೇಶ್ವರ, ಡಿ.9: ಹಾಕಿ ವರ್ಲ್ಡ್ ಲೀಗ್ ಫೈನಲ್ನಲ್ಲಿ ಐದನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಸ್ಪೇನ್ ತಂಡವನ್ನು ಬೆಲ್ಜಿಯಂ 1-0 ಅಂತರದಲ್ಲಿ ಸೋಲಿಸಿದೆ. ಸೆಬಾಸ್ಟಿಯನ್ ಡೊಕೈರ್ ಅವರು ಪಂದ್ಯದ ಪ್ರಥಮಾರ್ಧದಲ್ಲಿ 1 ಗೋಲು ದಾಖಲಿಸಿ ಬೆಲ್ಜಿ ಯಂಗೆ ಗೆಲುವು ತಂದು ಕೊಟ್ಟರು.
ಈ ಗೆಲುವಿನೊಂದಿಗೆ ಬೆಲ್ಜಿಯಂ ಕೂಟದಲ್ಲಿ 5ನೇ ಸ್ಥಾನ ಪಡೆಯಿತು. ರೌಂಡ್ ರಾಬಿನ್ ಹಂತದ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಬೆಲ್ಜಿಯಂ 5-0 ಅಂತರದಲ್ಲಿ ಜಯ ಗಳಿಸಿತ್ತು.
Next Story