ಬೆಂಗಳೂರು: ಟ್ರಂಪ್ ವಿರುದ್ಧ ಡಿ.11 ರಂದು ಪ್ರತಿಭಟನೆ
ಬೆಂಗಳೂರು, ಡಿ.10: ಅಮೆರಿಕ ಸಾಮ್ರಾಜ್ಯಶಾಹಿಗಳು ಜೆರುಸೆಲಂ ಅನ್ನು ಇಸ್ರೇಲ್ ರಾಜಧಾನಿ ಎಂದು ಘೋಷಣೆ ಮಾಡಿರುವುದನ್ನು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.
ಈಗಾಗಲೇ ಪ್ರಪಂಚದಾದ್ಯಂತ ಟ್ರಂಪ್ ರ ನಿರ್ಧಾರದ ವಿರುದ್ಧ ಪ್ರತಿಭಟನೆಗಳ ಭುಗಿಲೇಳುತ್ತಿವೆ. ವಿಶ್ವ ಸಂಸ್ಥೆಯೂ ಅಮೆರಿಕ ಕ್ರಮವನ್ನು ಖಂಡಿಸಿದೆ. ಅಮೆರಿಕ ಬೇರೆ ದೇಶಗಳ ಆಂತರಿಕ ವಿಷಯದಲ್ಲಿ ತಲೆ ಹಾಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಎಸ್ಯುಸಿಐವತಿಯಿಂದ ಡಿ.11 ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story