ಮಂಡ್ಯ: ಬೇಬಿಬೆಟ್ಟ ಬಳಿ ಚಿರತೆ ಮರಿ ಪತ್ತೆ
ಮಂಡ್ಯ, ಡಿ.10: ಪಾಂಡವಪುರ ತಾಲೂಕಿನ ಬನ್ನಂಗಾಡಿ ಗ್ರಾಮ ಸಮೀಪದ ಬೇಬಿಬೆಟ್ಟದಲ್ಲಿ ಸಿಕ್ಕಿದ ಎರಡು ಚಿರತೆ ಮರಿಗಳನ್ನು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.
ಭಾನುವಾರ ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರಿಂದ ಮಾಹಿತಿ ತಿಳಿದ ಯುವಕರು ಮರಿಗಳನ್ನು ಗ್ರಾಮಕ್ಕೆ ತಂದರು. ಮರಿಗಳನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರಿಗಳನ್ನು ಒಪ್ಪಿಸಿದ ಗ್ರಾಮಸ್ಥರು, ಬನ್ನಂಗಾಡಿ, ಬಿಂಡಹಳ್ಳಿ, ಡಿಂಕಾ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ಹಸು, ಮೇಕೆ, ಕುರಿ, ನಾಯಿಗಳನ್ನು ತಿಂದು ಹಾಕುತ್ತಿದ್ದು, ಸೆರೆಹಿಡಿಯಬೇಕೆಂದು ಒತ್ತಾಯಿಸಿದರು.
Next Story