ವಿದ್ಯುತ್ ಅವಘಡ : ನೌಕರ ಸಾವು
ಶಿವಮೊಗ್ಗ, ಡಿ. 11: ವಿದ್ಯುತ್ ಅವಘಡದಿಂದ ನೌಕರನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಚನ್ನಬಸವಯ್ಯ ಮೃತಪಟ್ಟ ನೌಕರ ಎಂದು ಗುರುತಿಸಲಾಗಿದೆ. ಇವರು ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿರುವ 110/11 ಕೆ.ವಿ. ಪವರ್ ಸ್ಟೇಷನ್ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಎಂದಿನಂತೆ ಕರ್ತವ್ಯ ನಿರ್ವಹಣೆ ಮಾಡುವ ವೇಳೆ ಇವರು ವಿದ್ಯುತ್ ಶಾಕ್ಗೆ ತುತ್ತಾಗಿದ್ದರು.
ತಕ್ಷಣವೇ ಅವರನ್ನು ಸಹೋದ್ಯೋಗಿಗಳು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚೆನ್ನಬಸವಯ್ಯ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Next Story