ಮಡಿಕೇರಿ : ಮಹಿಳಾ ಕಾಂಗ್ರೆಸ್ ಸಮಿತಿ ಪುನರ್ ರಚನೆ - ಅಧ್ಯಕ್ಷರಾಗಿ ಮಂಜುಳ ಆಯ್ಕೆ
ಮಡಿಕೇರಿ,ಡಿ.11 : ಮಡಿಕೇರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ವಿ.ವಿ.ಮಂಜುಳ ಆಯ್ಕೆಯಾಗಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ನ ಜಿಲ್ಲಾಧ್ಯಕ್ಷರಾದ ಜಿ.ಆರ್.ಪುಷ್ಪಲತಾ ತಿಳಿಸಿದ್ದಾರೆ.
ಉಪಾಧ್ಯಕ್ಷರುಗಳಾಗಿ ಜಮೀಲ, ಕೆ.ಎನ್.ರತ್ನ, ಕಾವೇರಿ, ನಾಗಚೆಟ್ಟಿರ ಪೂವಮ್ಮ, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ಎಸ್.ಪವಿತ್ರ, ಬಿ.ಎಸ್. ಭಾರತಿ, ಕಾರ್ಯದರ್ಶಿಯಾಗಿ ಆರ್.ಸಿ.ಮಲ್ಲಿಗೆ ಹಾಗೂ ಸದಸ್ಯರುಗಳಾಗಿ ಶಿವಮ್ಮ, ಹರಿಣಿ, ಹೆಚ್.ಎನ್.ಧನಲಕ್ಷ್ಮಿ, ಅನ್ನಮ್ಮ ಮರಿಯ, ಎಂ.ಮಂಜುಳ, ಫೌಸಿಯಾ, ನಂಜಾಮಣಿ, ಸೋರಾ, ಪಿ.ಎಸ್.ರಾಣಿ, ಹೆಚ್.ಕೆ.ರಾಧಾ, ಚೆನ್ನಮ್ಮ, ರಾಣಿ, ಎಂ.ಬಿ.ರೀನಾ, ಸುಲೋಚನ, ಓಮನ, ಫಿರ್ದೋಸ, ದೇವಕಿ, ಬಿ.ಎಂ.ನೀಲಮ್ಮ ಹೆಚ್.ಎಸ್.ಮಣಿ, ಲಲಿತ ಅವರುಗಳನ್ನು ಆಯ್ಕೆ ಮಾಡಿರುವುದಾಗಿ ಪುಷ್ಪಲತಾ ತಿಳಿಸಿದ್ದಾರೆ.
Next Story