varthabharthi

ಗಲ್ಫ್ ಸುದ್ದಿ

ಮಸ್ಕತ್ ಡಿಕೆಎಸ್ ಸಿ ವತಿಯಿಂದ 'ಹುಬ್ಬು ರಸೂಲ್'

ವಾರ್ತಾ ಭಾರತಿ : 11 Dec, 2017
ತೋನ್ಸೆ ಶೇಖ್ ತಾಜುದ್ದೀನ್ ಮಸ್ಕತ್

ಮಸ್ಕತ್, ಡಿ. 11: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್- ಮಂಗಳೂರು ಇದರ ಅಧೀನದಲ್ಲಿರುವ ಅಲ್ ಇಹ್ ಸಾನ್ ಎಜುಕೇಶನ್  ಸೆಂಟರ್, ಇದರ ವತಿಯಿಂದ ಒಮಾನ್ ನಲ್ಲಿ ಪ್ರವಾದಿ ಮುಹಮ್ಮದ್ ಜನ್ಮ ದಿನಾಚರಣೆಯ ಅಂಗವಾಗಿ ಮಿಲಾದ್ ಕಾರ್ಯಕ್ರಮ ಮಸ್ಕತ್ ನ ಅಲ್ ಮಾಸ ಹಾಲ್ ನಲ್ಲಿ ಜರುಗಿತು.

ಇಕ್ಬಾಲ್  ಮದನಿಯವರ ಕುರಾನ್ ಕಿರಾತ್ ನೊಂದಿಗೆ ಪ್ರಾರಂಭವಾಯಿತು. ಅನ್ಸಾರ್ ಕಾಟಿಪಳ್ಳ ಅವರು ಸ್ವಾಗತ ಭಾಷಣ ಮಾಡಿ  ನಬಿ ದಿನದ ಬಗ್ಗೆ  ಕವನ ವಾಚಿಸಿದರು.

 ಸಯ್ಯದ್ ಫಕರುದ್ದೀನ್ ಫುಕೊಯಾ ತಂಙಳ್ (ಮಿನಿಸ್ಟ್ರಿ ಆಫ್ ಇಸ್ಲಾಮಿಕ್ ಅಫ್ಫೇರ್ಸ್ ಅನುಮೋದಿತ ವಿದ್ವಾಂಸ, ಬಹರೇನ್) ಮಾತನಾಡಿ ಇಂದಿನ ಮಕ್ಕಳ ತರಬೇತಿಯಲ್ಲಿ ತಂದೆ ತಾಯಂದಿರ ಪಾತ್ರ ಏನು ಎಂಬುದರ ಬಗ್ಗೆ ವಿವರಿಸಿದರು.

ಕೆ. ಸಿ. ಎಫ್. ಒಮನ್ ನ ರಾಷ್ಟ್ರೀಯ ಗೌರವಾಧ್ಯಕ್ಷ  ಉಮರ್ ಸಖಾಫಿ ಮಾತನಾಡಿದರು. ಮಹಮ್ಮದ್ ಹನೀಫ್ ರಾಝ ಖಾದ್ರಿ ಬಿಜಾಪುರ ನಾತ್ ಪಠಿಸಿದರು. 

ಕರ್ನಾಟಕ  ಜಂಇಯ್ಯತುಲ್  ಉಲಮಾ ಅಧ್ಯಕ್ಷರೂ, ಪ್ರಾಂಶುಪಾಲರು ಅಲ್ ಇಹ್ ಸಾನ್ ಶರಿಯತ್ ಕಾಲೇಜು, ಮೂಳೂರು  ಹಾಗು ಉಡುಪಿ ಜಿಲ್ಲಾ ಸಂಯುಕ್ತ ಖಾಝಿಯೂ ಆಗಿರುವ ಪಿ. ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಮಾತನಾಡಿ ಪ್ರವಾದಿಯಾ ಶಾಂತಿ  ಸಂದೇಶವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಕೆಎಸ್ ಸಿ ಒಮಾನ್ ರಾಷ್ಟ ಸಮಿತಿಯ ಅಧ್ಯಕ್ಷ ಮೋನಬ್ಬ ಅಬ್ದುಲ್ ರಹ್ಮಾನ್ ಮಾತನಾಡಿ, ಡಿಕೆಎಸ್ ಸಿ ಯ ಹೊಸ ಯೋಜನೆ ಡಿಕೆಎಸ್ ಸಿ "ಸಿಲ್ವರ್ ಕಾರ್ಡ್" ಕುರಿತ  ಪರಿಚಯ ನೀಡಿದರು. ಡಿಕೆಎಸ್ ಸಿ ಸಿಲ್ವರ್ ಕಾರ್ಡ್ ಅನ್ನು ಒಮನ್ ನಲ್ಲಿ ಅನಾವರಣಗೊಳಿಸಲಾಯಿತು.

ಸಿಲ್ವರ್ ಕಾರ್ಡ್ ನ ಪ್ರಥಮ ಚಂದಾದರಾಗಿ ಮಹಮ್ಮದ್ ಇಬ್ರಾಹಿಂ ಅತ್ರಾಡಿ ಯವರಿಗೆ ಮೋನಬ್ಬ ಅಬ್ದುಲ್ ರಹಮಾನ್ ಕಾರ್ಡ್  ಹಸ್ತಾಂತರಿಸುವ ಮುಖಾಂತರ ಈ ಹೊಸ ಯೋಜನೆಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗಾಗಿ ನಾತ್, ಕಿರಾತ್ ಹಾಗು ಭಾಷಣ ಸ್ಪರ್ಧೆಯನ್ನು ನಡೆಸಲಾಯಿತು. ವಿಜೇತ ಮಕ್ಕಳಿಗೆ ಬಹುಮಾನವನ್ನು ಹಾಗು ಎಲ್ಲ ಸ್ಪರ್ಧಿಸಿದ ಮಕ್ಕಳಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳ ಕಾರ್ಯಕ್ರಮ ಹಾಗು ಬಹುಮಾನ ವಿತರಣೆಯನ್ನು ಅಶ್ರಫ್ ಬಾವಾ ಮಂಗಳೂರು ಹಾಗು ನೂರುಲ್ಲಾ ಪಡುಬಿದ್ರೆ  ನೆರವೇರಿಸಿದರು.

ವೇದಿಕೆಯಲ್ಲಿ ಅಬ್ಬಾಸ್ ಉಚ್ಚಿಲ್, ಅಧ್ಯಕ್ಷರು ಡಿಕೆಎಸ್ ಸಿ ಹುಬ್ಬು ರಸೂಲ್ ಕಮಿಟಿ 2017, ದಾರುಸ್ಸಲಾಮ್ ಸಮಿತಿ ಮಸ್ಕತ್ ಒಮನ್ ನ ಅಧ್ಯಕ್ಷ  ಹಾಜಿ ಘನಿ ತೋನ್ಸೆ, ಎಸ್ ಕೆ ಎಂ ಡಬ್ಲ್ಯೂಎ ಒಮನ್  ಅಧ್ಯಕ್ಷ ಮಹಮ್ಮದ್ ಹುಸೇನ್ ಕಾರ್ಕಳ, ಕೆ. ಸಿ. ಎಫ್. ಒಮನ್ ಉಪಾಧ್ಯಕ್ಷ ಅಯ್ಯುಬ್ ಕೊಡಿ, ಅಲ್ ಖಾದಿಸ ಎಜುಕೇಶನ್ ಟ್ರಸ್ಟ್ ಕಾವಲ್ಕಟ್ಟೆ ಅಧ್ಯಕ್ಷ ಸಮೀರ್ ಉಸ್ತಾದ್ ತೋನ್ಸೆ, ಪ್ರವಾಸಿ ಭಾರತಿ ಫೋರಮ್ ಮಸ್ಕತ್  ಅಧ್ಯಕ್ಷ ಅನ್ವರ್ ಮೂಡಬಿದ್ರಿ , ಒಮನ್ ಸಿರಾಜುಲ್ ಹುದಾ ಪಾಡಿ ಅಧ್ಯಕ್ಷ ನಿಝಾರ್ ಝುಹ್ರಿ ಕನ್ಯಾನ ಉಪಸ್ಥಿತರಾಗಿದ್ದರು.

 ಮುಹಿಯುದ್ದೀನ್ ಪಡುಬಿದ್ರೆ ವಂದಿಸಿದರು, ಕಲಂದರ್ ಇಹ್ ಸಾನ್  ಕಾರ್ಯಕ್ರಮ ನಿರೂಪಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)