ಸಿಂಧುಗೆ ದುಬೈ ಫೈನಲ್ಸ್ನಲ್ಲಿ ಪ್ರಶಸ್ತಿ ಗೆಲ್ಲುವ ಕನಸು
ಹೊಸದಿಲ್ಲಿ, ಡಿ.11: ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ದುಬೈ ಸೂಪರ್ ಸಿರೀಸ್ ಫೈನಲ್ನಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ 2017ನೇ ವರ್ಷವನ್ನು ಕೊನೆಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ.
ದುಬೈ ಸೂಪರ್ ಸಿರೀಸ್ ಫೈನಲ್ ಟೂರ್ನಮೆಂಟ್ ಬುಧವಾರ ಆರಂಭಗೊಳ್ಳಿದೆ.
ಕಳೆದ ವರ್ಷ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಈ ವರ್ಷ ಇಂಡಿಯಾ ಓಪನ್ ಸೂಪರ್ ಸಿರೀಸ್ ಮತ್ತು ಕೋರಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಗ್ಲಾಸ್ಗೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಮತ್ತು ಹಾಂಕಾಂಗ್ ಓಪನ್ನಲ್ಲಿ ಕಳೆದ ತಿಂಗಳು ಎರಡನೇ ಸ್ಥಾನ ಗಳಿಸಿದ್ದರು.
ದುಬೈ ಸೂಪರ್ ಸಿರೀಸ್ ಫೈನಲ್ನಲ್ಲಿ ಭಾರತದ ಪಿ.ವಿ.ಸಿಂಧು, ಕೆ.ಶ್ರೀಕಾಂತ್ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ
Next Story