ಮಾಜಿ ಸೈನಿಕರಿಗೆ ಉದ್ಯೋಗ ಅವಕಾಶ
ಚಿಕ್ಕಮಗಳೂರು, ಡಿ.12: Bureau of Immigration ಅವರುImmigration Assistant ಹಾಗೂ Immigration support staff ಹುದ್ದೆಗಾಗಿ ಅರ್ಜಿ ಆಹ್ವಾನಿಸಿದ್ದಾರೆ. ಅರ್ಜಿಗಳನ್ನು ಡಿ.15 ರೊಳಗೆ ಉಪನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಸನ ಇವರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಯು Bureau of Immigration ಹುದ್ದೆಗೆ ಜೆಸಿಒ, ಪಿಯುಸಿ ಪಾಸಾಗಿರಬೇಕು. ಇಂಗ್ಲೀಷ್ ಹಾಗೂ ಗಣಕ ಯಂತ್ರದ ಜ್ಞಾನ ಹೊಂದಿದ 50 ವರ್ಷದೊಳಗಿನವರು ಮತ್ತು Immigration support staff ಹುದ್ದೆಗೆ ಎನ್ಸಿಒ ಆಗಿರಬೇಕು. 10ನೇ ತರಗತಿ ಪಾಸಾಗಿರಬೇಕು, ಇಂಗ್ಲೀಷ್ ಹಾಗೂ ಗಣಕ ಯಂತ್ರದ ಜ್ಞಾನ ಹೊಂದಿರುವ 45 ವರ್ಷದೊಳಗಿನ ಇಚ್ಚೆಯುಳ್ಳ ಮಾಜಿ ಸೈನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಹಾಸನ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story