varthabharthi

ಝಲಕ್

ಚರ್ಚೆ

ವಾರ್ತಾ ಭಾರತಿ : 13 Dec, 2017
-ಮಗು

ವೃದ್ಧಾಶ್ರಮಕ್ಕೆ ತಾಯಿಯನ್ನು ಸೇರಿಸಲು ಬಂದಿದ್ದ. ಶುಲ್ಕ ದುಬಾರಿ ಅನ್ನಿಸಿತು ಮಗನಿಗೆ. ಚರ್ಚೆಗೆ ತೊಡಗಿದ.

ವೃದ್ಧಾಶ್ರಮದ ಸಂಚಾಲಕರು ಹೇಳಿದರು ‘‘ಇಬ್ಬರಿಗಾದರೆ ಕಡಿಮೆ ಮಾಡಿ ಕೊಡುವಾ?’’
‘‘ಇಬ್ಬರು ಇಲ್ಲ. ನನ್ನ ತಾಯಿ ಮಾತ್ರ’’ ಮಗ ಉತ್ತರಿಸಿದ.
‘‘ಹಾಗಾದರೆ ನಿಮ್ಮ ತಾಯಿಯ ಜೊತೆಗೆ ನಿಮಗೂ ಈಗಲೇ ಬುಕ್ ಮಾಡಿ. ಕಡಿಮೆ ಮಾಡಿ ಕೊಡುವಾ’’
ಮಗ ಬೆಚ್ಚಿ ತಾಯಿಯ ಕಡೆ ನೋಡಿದ. ಮತ್ತೆ ಬರುವೆ ಎಂದು ತಾಯಿಯನ್ನು ಅಲ್ಲಿಂದ ಕರೆದುಕೊಂಡು ಹೋದ ಮಗ, ಮತ್ತೆ ತಿರುಗಿಯೂ ಆ ಕಡೆ ನೋಡಲಿಲ್ಲ.

 

 

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು