varthabharthi

ನಿಧನ

ಅಬ್ದುಲ್ಲಾ

ವಾರ್ತಾ ಭಾರತಿ : 13 Dec, 2017

ಬಂಟ್ವಾಳ, ಡಿ. 13: ಕೊಳ್ನಾಡು ಗ್ರಾಮದ ನಾಟೆಕಲ್ಲು ನಿವಾಸಿ ಎನ್ ಅಬ್ದುಲ್ಲಾ (65) ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಸಾಲೆತ್ತೂರು ಮೈದಾನದಲ್ಲಿ ಕಳೆದ 20 ವರ್ಷದಿಂದ ಅಂಗಡಿಯಿಟ್ಟು, ದಿನಪತ್ರಿಕೆ ಏಜೆಂಟರಾಗಿ, ಹಾಲು ಇನ್ನಿತರ ವಸ್ತುಗಳ ವಿತರಕರಾಗಿ ವ್ಯಾಪಾರ ನಡೆಸುತ್ತಿದ್ದರು. ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ, ಕಟ್ಟತ್ತಿಲ ಜುಮಾ ಮಸೀದಿ ಹಾಗೂ ನಾಟೆಕಲ್ಲು ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 

ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

 

Comments (Click here to Expand)