varthabharthi

ಗಲ್ಫ್ ಸುದ್ದಿ

ಡಿ.15: ಕೆಸಿಎಫ್ ದುಬೈ ಸೌತ್ ಝೋನ್ ವತಿಯಿಂದ 'ಮೆಹ್ಫಿಲೇ ಮುಸ್ತಫಾ' ಮೀಲಾದ್ ಸಮಾವೇಶ

ವಾರ್ತಾ ಭಾರತಿ : 14 Dec, 2017

ದುಬೈ, ಡಿ. 14:  ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ( ಕೆಸಿಎಫ್) ದುಬೈ ಸೌತ್ ಝೋನ್ ಇದರ ವತಿಯಿಂದ  ಬರ್ ದುಬೈಯ ಅಲ್ ಫಹೀದಿ ಮೆಟ್ರೊ ಸ್ಟೇಷನ್ ಸಮೀಪದ ಮುಸಲ್ಲ ಟವರ್ ನಲ್ಲಿ  ಡಿ.15 ರಂದು ಸಂಜೆ 6:30ಕ್ಕೆ  'ಸಹಿಷ್ಣುತೆಯ ಸಂದೇಶ ವಾಹಕ' ಎಂಬ ವಿಷಯದಲ್ಲಿ 'ಮೆಹ್ಫಿಲೇ ಮುಸ್ತಫಾ' ಮೀಲಾದ್ ಸಮಾವೇಶ ನಡೆಯಲಿದೆ.

ಕೆಸಿಎಫ್ ಸೌತ್ ಝೋನ್ ಹಮ್ಮಿಕೊಂಡಿರುವ ಮೀಲಾದ್ ಸಮಾವೇಶದ ಕುರಿತು ಪತ್ರಿಕಾಗೋಷ್ಠಿಯನ್ನು ಇತ್ತೀಚೆಗೆ ಬರ್ ದುಬೈಯ ಕೆಸಿಎಫ್ ಕಚೇರಿಯಲ್ಲಿ  ನಡೆಸಲಾಯಿತು.

 ಅಸೈಯದ್  ಶಿಹಾಬುದ್ದೀನ್ ತಂಙಳ್ ಅಲ್ ಹೈದ್ರೋಸಿ ಕಿಲ್ಲೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕರ್ನಾಟಕ ಎಸ್ ವೈ ಎಸ್  ರಾಜ್ಯಾದ್ಯಕ್ಷ  ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಕೆಸಿಎಫ್  ಅಂತಾರಾಷ್ಟ್ರೀಯ ನೇತರರು ಹಾಗೂ ಯುಎಇ ಯ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.

ಪ್ರಸ್ತುತ ಕಾರ್ಯಕ್ರಮದಲ್ಲಿ  ಬುರ್ದಾ ತಂಡದಿಂದ ಬುರ್ದಾ ಆಲಾಪನೆ, ಹುಬ್ಬುರ್ರಸೂಲ್ ಪ್ರಭಾಷಣ , ಮಂಕೂಸ್ ಮೌಲಿದ್ ಕನ್ನಡವ್ಯಖ್ಯಾನ ಬಿಡುಗಡೆ ಮತ್ತು ಮೀಲಾದ್ ಸಮಾವೇಶದ ಅಂಗವಾಗಿ ಏರ್ಪಡಿಸಿದ ಪ್ರತಿಭೋತ್ಸವದ ವಿಜೇತರಿಗೆ ಹಾಗೂ ಕರ್ನಾಟಕ ರಾಜ್ಯೋತ್ಸವದ ಪರವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವಿರುವುದಾಗಿ ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷ  ನಝೀರ್ ಹಾಜಿ ಕೆಮ್ಮಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಅಹ್ಸನಿ, ಕೆಸಿಎಫ್ ಸೌತ್ ಝೋನ್ ನೋಲೆಜ್ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್ ಸಖಾಫಿ,  ಕೊಡಗು ಜಿಲ್ಲಾ ಎಸ್ ವೈ ಎಸ್ ಉಪಾಧ್ಯಕ್ಷ ಉಮರ್ ಸಖಾಫಿ ಎಡಪಾಲ, ಮೀಲಾದ್ ಸ್ವಾಗತ ಸಮಿತಿಯ ಕಾರ್ಯದರ್ಶಿ ಶರೀಫ್ ಹೊಸ್ಮಾರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)