varthabharthi

ಸಿನಿಮಾ

ಅಕ್ಷಯ್‌ಗೆ ಗೋಲ್ಡ್

ವಾರ್ತಾ ಭಾರತಿ : 15 Dec, 2017

ಭಾರತ ಸ್ವಾತಂತ್ರ್ಯಗೊಂಡ ಬಳಿಕ ಗೆದ್ದ ಪ್ರಪ್ರಥಮ ಒಲಿಂಪಿಂಕ್ ಸ್ವರ್ಣದ ಹಿಂದಿರುವ ರೋಚಕಕಥೆಯನ್ನು ಹೇಳುವ ‘ಗೋಲ್ಡ್’ನ ಶೂಟಿಂಗ್ ಈಗ ಪೂರ್ಣಗೊಂಡಿದೆ. ಅಕ್ಷಯ್‌ಕುಮಾರ್ ನಾಯಕನಾಗಿರುವ, ಗೋಲ್ಡ್ ಚಿತ್ರರಸಿಕರಲ್ಲಿ ಸಂಚಲನಸೃಷ್ಟಿಸಿದೆ. 1948, 1952 ಹಾಗೂ 1956ರ ಒಲಿಂಪಿಕ್ಸ್‌ನ ಹಾಕಿ ಪಂದ್ಯಗಳಲ್ಲಿ ಭಾರತಕ್ಕೆ ಸತತ ಮೂರು ಚಿನ್ನವನ್ನು ತಂದುಕೊಟ್ಟ ಹಾಕಿ ಆಟಗಾರ ಬಲ್‌ಬೀರ್‌ಸಿಂಗ್‌ನಾಗಿ ಅಕ್ಷಯ್, ಈ ಚಿತ್ರದಲ್ಲಿ ನಟಿಸಿದ್ದಾರೆ. ರಿತೇಶ್ ಸಿಂಧ್ವಾನಿ ಹಾಗೂ ಫರ್ಹಾನ್ ಅಖ್ತರ್ ಜಂಟಿಯಾಗಿ ಗೋಲ್ಡ್ ನಿರ್ಮಿಸುತ್ತಿದ್ದಾರೆ.

ನಿರ್ದೇಶಕಿ ರೀಮಾ ಕಾಗ್ತಿ ಈಗಾಗಲೇ ಚಿತ್ರದ ಝಲಕ್‌ನ ವೀಡಿಯೊವೊಂದನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಪ್ರಸಾರ ಮಾಡಿದ್ದಾರೆ.

ವೀಡಿಯೊದಲ್ಲಿ ಅಕ್ಷಯ್‌ಕುಮಾರ್, ಸ್ವಲ್ಪ ದೂರದಿಂದ ಓಡುತ್ತಾ ಬಂದು, ಕುರ್ಚಿಯ ಮೇಲೆ ಕಾಲಿಟ್ಟು ಜಿಗಿಯುವ ದೃಶ್ಯವಿದೆ ಹಾಗೂ ಒಂದೇ ಕೈಯಲ್ಲಿ ಪಲ್ಟಿ ಹೊಡೆಯುವುದನ್ನೂ ವೀಡಿಯೊದಲ್ಲಿ ತೋರಿಸಲಾಗಿದೆ.. ಸರಳವಾದ ಧೋತಿಯೊಂದಿಗೆ, ಅಕ್ಷಯ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಗೋಲ್ಡ್ ಮೂಲಕ ಕಿರುತೆರೆಯ ಖ್ಯಾತ ನಟಿ ವೌನಿ ರಾಯ್, ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಮುಂದಿನ ವರ್ಷವಂತೂ ಅಕ್ಷಯ್ ಅಭಿಮಾನಿಗಳಿಗಂತೂ ಹಬ್ಬವೇ ಸರಿ. ಯಾಕೆಂದರೆ, ಗೋಲ್ಡ್ ಸೇರಿದಂತೆ ಅವರ ಮೂರು ಚಿತ್ರಗಳು ಮೊದಲ ಆರು ತಿಂಗಳೊಳಗೆ ಬಿಡುಗಡೆಯಾಗುತ್ತಿವೆ. ಗೋಲ್ಡ್‌ಗೆ ಮುನ್ನ ಅಕ್ಷಯ್ ನಟಿಸಿರುವ ಪ್ಯಾಡ್‌ಮ್ಯಾನ್ ಜನವರಿ 26ರಂದು ತೆರೆಕಾಣಲಿದೆ. ಆನಂತರ ಎಪ್ರಿಲ್‌ನಲ್ಲಿ ರಜನಿಕಾಂತ್ ನಾಯಕನಾಗಿರುವ 2.0, ರಿಲೀಸ್ ಆಗಲಿದ್ದು, ಅದರಲ್ಲಿ ಅಕ್ಷಯ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)