varthabharthi

ಗಲ್ಫ್ ಸುದ್ದಿ

ದುಬೈ: ದಾರುನ್ನೂರ್ ಮೆಹಫಿಲೇ ಮೀಲಾದ್, ಯುಎಇ ರಾಷ್ಟ್ರೀಯ ದಿನಾಚರಣೆ

ವಾರ್ತಾ ಭಾರತಿ : 18 Dec, 2017

ದುಬೈ, ಡಿ. 18: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯುಎಇ ಕಲ್ಚರಲ್ ಸೆಂಟರ್ ವತಿಯಿಂದ ದೇರಾ ದುಬೈಯಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಯುಎಇ ರಾಷ್ಟ್ರೀಯ ದಿನಾಚರಣೆ ಮತ್ತು ಮೆಹಫಿಲೇ ರಸೂಲ್ ಮೀಲಾದ್ ಸಮಾರಂಭವು ಇತ್ತೀಚೆಗೆ ನಡೆಯಿತು.

 ಸಯ್ಯದ್ ಆಸ್ಕರ್ ಅಲಿ ತಂಙಳ್, ಉಸ್ತಾದ್ ಶರೀಫ್ ಅಶ್ರಫಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಕಾರ್ಯಕ್ರಮವು ನೆರವೇರಿತು. ದುಬೈ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸಫ್ವಾನ್ ತಂಡದಿಂದ ಬುರ್ಧಾ ಆಲಾಪನೆ, ಅಮೀನ್ ವೋಹ್ರಾ ಗುಜರಾತ್ ಅವರು ನಾಥೇ ಶರೀಫ್ ನಡೆಸಿದರು.

ದಾರುನ್ನೂರ್ ಯುಎಇ ಉಪಾಧ್ಯಕ್ಷ  ಸಂಶುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ದುಬೈ ಸುನ್ನಿ ಸೆಂಟರ್ ಇದರ ಧಾಮಿಕ ಭೋದಕರೂ, ಮೆಹಫಿಲೇ ರಸೂಲ್ ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರರೂ ಆದ ಉಸ್ತಾದ್ ಸಲ್ಮಾನ್ ಅಝ್ ಹರಿ,  ದಾರುನ್ನೂರ್ ಕೇಂದ್ರ ಸಮಿತಿ ಮಂಗಳೂರು ಇದರ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ದಾರುನ್ನೂರ್ ಯು ಎ  ಇ ಇದರ ಪೋಷಕರಾದ  ಮತೀನ್ ಅಹ್ಮದ್ ಚಿಂಲಿ ಬಂದರ್ ಮಂಗಳೂರು, ದಾರುನ್ನೂರ್ ಯು ಎ ಇ ಇದರ ಸಲಹೆಗಾರರೂ, ಕರ್ನಾಟಕ ಎಸ್ಕೆಎಸ್ಸೆಸ್ಸೆಫ್ ದುಬೈ ಸಮಿತಿಯ ಅಧ್ಯಕ್ಷ ಸಯ್ಯದ್ ಅಸ್ಕರ್ ಅಲಿ ತಂಗಳ್, ದಾರುನ್ನೂರ್ ಯು ಎ ಇ ಇದರ ಸಲಹೆಗಾರರೂ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ ಇದರ ಯು ಎ ಇ ಕೇಂದ ಸಮಿತಿ ಅಧ್ಯಕ್ಷ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ, ದಾರುನ್ನೂರ್ ಯು ಎ ಇ ಸಲಹೆಗಾರರೂ, ದುಬೈ ಸುನ್ನಿ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿಯೂ ಆದ ಉಸ್ತಾದ್ ಶೌಕತ್ ಅಲಿ ಹುದವಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರ್ ಇದರ ಯು ಎ ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಬಿ.ಕೆ ಶರೀಫ್ ಕಾವು, ಸಂಶುಲ್ ಉಲಮಾ ಅರಬಿಕ್ ಕಾಲೇಜ್ ತೋಡಾರ್ ಇದರ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ ಮೊದಲಾದವರು  ಉಪಸ್ಥಿತರಿದ್ದರು.

ಸಯ್ಯದ್ ಅಸ್ಕರ್ ತಂಙಳ್  ದುಆ ನೆರವೇರಿಸಿದರು. ದಾರುನ್ನೂರ್ ಕಲ್ಚರಲ್ ಸೆಂಟರ್ ಇದರ ಮೆಹಫಿಲೇ ರಸೂಲ್ ಮೀಲಾದ್ ಸಮಿತಿ ಚೇರ್ಮೇನ್  ಮಹಮ್ಮದ್ ರಫೀಕ್ ಆತೂರು ಸ್ವಾಗತಿಸಿದರು. ಉಸ್ತಾದ್ ಶೌಕತ್ ಅಲಿ ಹುದವಿ  ಉದ್ಘಾಟಿಸಿದರು. 

ದಾರುನ್ನೂರ್ ಕೇಂದ್ರ  ಸಮಿತಿ ಪ್ರಮುಖರಾದ  ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಉಸ್ತಾದ್ ಸಲ್ಮಾನ್ ಅಝ್ ಹರಿಯ ಮಾತನಾಡಿದರು.

ಕಾರ್ಯಕ್ರಮದ ಯಶಸ್ವಿಗೆ  ನವಾಝ್ ಬಿ.ಸಿ ರೋಡ್,  ಅಬ್ದುಲ್ ರಝಾಕ್ ಸೋಂಪಾಡಿ,  ಮಹಮ್ಮದ್ ರಫೀಕ್ ಸುರತ್ಕಲ್, ಉಸ್ಮಾನ್ ಕೆಮ್ಮಿಂಜೆ,  ಸಫಾ ಇಸ್ಮಾಯಿಲ್ ಬಜ್ಪೆ,  ಸುಹೈಲ್ ಚೊಕ್ಕಬೆಟ್ಟು,  ಇಲ್ಯಾಸ್ ಕಡಬ,  ಅನ್ಸಾಫ್ ಪಾತೂರು,  ಸಾಜಿದ್ ಬಜ್ಪೆ, ಅಬ್ದುಲ್ ರಝಾಕ್ ಕರೈ, ಸಂಶುದ್ದೀನ್ ಹಮೀದ್ ಮೂಡಬಿದ್ರೆ,   ಸಿದ್ದೀಕ್ ಪಾಣೆ ಮಂಗಳೂರು,  ನಾಸಿರ್ ಬಪ್ಪಳಿಗೆ,  ಇಸ್ಮಾಯಿಲ್ ತೋಡಾರ್ ಮೊದಲಾದವರು ಸಹಕರಿಸಿದರು.

 ಬದ್ರುದ್ದೀನ್ ಹೆಂತಾರ್ ಮತ್ತು  ಅಶ್ರಫ್ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಮೆಹಫಿಲೇ ರಸೂಲ್  ಮೀಲಾದ್ ಸಮಿತಿ ಕಾರ್ಯದರ್ಶಿ  ಶಾಹುಲ್ ಬಿ.ಸಿ ರೋಡ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)