varthabharthi

ಗಲ್ಫ್ ಸುದ್ದಿ

ಕುವೈತ್: ಕನ್ನಡ ಸಂಘಗಳ ಕಾರ್ಯಕ್ರಮದಲ್ಲಿ ಡಾ. ಆರತಿ ಕೃಷ್ಣ

ವಾರ್ತಾ ಭಾರತಿ : 19 Dec, 2017

ಕುವೈತ್, ಡಿ. 19: ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಅವರು ಶುಕ್ರವಾರ ಕುವೈತ್ ನಗರದಲ್ಲಿನ ಕನ್ನಡ ಸಂಘಗಳು ಹಮ್ಮಿಕೊಂಡ ಕಾರ್ಯಕ್ರದಲ್ಲಿ ರಾಜ್ಯ ಸರಕಾರದ ಪರವಾರ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿ ಜಾರಿಗೆ ತಂದಿರುವ ಅನಿವಾಸಿ ಭಾರತೀಯ/ಕನ್ನಡಿಗರ ನೀತಿಯ ಕುರಿತು ಅಲ್ಲಿ ನೆರೆದಿದ್ದಂತ ಅನಿವಾಸಿ ಕನ್ನಡಿಗರು ಕೆಲ ಪ್ರಶ್ನೆಗಳನ್ನು ವ್ಯಕ್ತಪಡಿಸಿದರು. ಇದಕ್ಕೆ  ಉತ್ತರಿಸಿದ ಡಾ. ಆರತಿ ಕೃಷ್ಣ ಅವರು ಸದರಿ ನೀತಿಯ ಬಗ್ಗೆ  ಮಾಹಿತಿ ನೀಡಿದರು, ಇದರಿಂದ ಅಲ್ಲಿನ ಕನ್ನಡಿಗರು ಹೊಸ ಅನಿವಾಸಿ ಭಾರತೀಯ ನೀತಿಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ತಾವುಗಳು ಹಮ್ಮಿಕೊಳ್ಳುವ ಇಂತಹ ಸಂಘಟಿತ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಪ್ರೋತ್ಸಾಹವನ್ನ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಕುವೈತ್‌ನ ಕನ್ನಡ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಸಂಘದ ಇತರೆ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು ಎಂದು ಪ್ರಕಟನೆ ತಿಳಿಸಿದೆ.

 

Comments (Click here to Expand)