varthabharthi

ಗಲ್ಫ್ ಸುದ್ದಿ

ದುಬೈ: ಡಾ.ಆರತಿ ಕೃಷ್ಣರಿಗೆ ‘ಕಾಯಕ ರತ್ನ’ ಬಿರುದು ಪ್ರದಾನ

ವಾರ್ತಾ ಭಾರತಿ : 20 Dec, 2017

 ದುಬೈ, ಡಿ.20: ಕೊಲ್ಲಿ ಪ್ರವಾಸ ತೆರಳಿದ್ದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಡಿ.19ರಂದು ದುಬೈಯ ಅಬುಧಾಬಿ ಕನ್ನಡ ಸಂಘ, ಶಾರ್ಜಾ ಕರ್ನಾಟಕ ಸಂಘ ಹಾಗೂ ಬ್ಯಾರೀಸ್ ಕಲ್ಚರಲ್ ಫೋರಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರಕಾರದ ಪರವಾಗಿ ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ಡಾ.ಆರತಿ ಕೃಷ್ಣ, ರಾಜ್ಯ ಸರಕಾರವು ಅನಿವಾಸಿ ಕನ್ನಡಿಗರ ಹಿತಾಸಕ್ತಿ ಕಾಪಾಡುವಲ್ಲಿ ವಿಶೇಷ ಆದ್ಯತೆ ನೀಡುತ್ತಿದೆ. ಹೊಸ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ನೂತನ ನೀತಿಯನ್ನ ಲೋಕಾರ್ಪಣೆ ಮಾಡಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

ವೀರೇಂದ್ರ ಬಾಬು ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ 62 ಕನ್ನಡ ರಾಜ್ಯೋತ್ಸವದ ಸವಿನೆನಪಿಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಸಂಘಟನೆಗಳು ಡಾ.ಆರತಿ ಕೃಷ್ಣರಿಗೆ ‘ಕಾಯಕ ರತ್ನ’ ಎಂಬ ಬಿರುದನ್ನು ನೀಡಿ ಗೌರವಿಸಿತು.

ಈ ಸಂದರ್ಭ ಸರ್ವೋತ್ತಮ ಶೆಟ್ಟಿ, ಸುಗಂಧ ರಾಜ್ ಬೇಕಲ್, ಡಾ.ಬಿ.ಕೆ.ಯೂಸುಫ್ ಹಾಗೂ ಇತರ ಕನ್ನಡ ಸಂಘಗಳ ಸದಸ್ಯರಾದ ಚಂದ್ರಕಾಂತ್ ಜಿ.ಆರ್., ರಫೀಕ್ ಕೊಡಗು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

Comments (Click here to Expand)