varthabharthi

ಗಲ್ಫ್ ಸುದ್ದಿ

ಡಿ. 29: ಕೆಸಿಎಫ್ ಶಾರ್ಜಾ ವತಿಯಿಂದ ಜೀಲಾನಿ ಅನುಸ್ಮರಣೆ, ತಾಜುಲ್ ಉಲಮಾ ಆಂಡ್ ನೇರ್ಚೆ

ವಾರ್ತಾ ಭಾರತಿ : 21 Dec, 2017

ಶಾರ್ಜಾ, ಡಿ. 21: ಕರ್ನಾಟಕ ಕಲ್ಚರಲ್ ಫೌಂಡೇಶನ್ ಶಾರ್ಜಾ ಝೋನ್ ವತಿಯಿಂದ ಡಿ. 29ರಂದು   ಮಗ್ರಿಬ್ ನಮಾಝ್ ಬಳಿಕ ಜೀಲಾನಿ ಅನುಸ್ಮರಣೆ ಹಾಗೂ ತಾಜುಲ್ ಉಲಮಾ ಆಂಡ್ ನೇರ್ಚೆ ಇಲ್ಲಿನ ಅಲ್‌ಯಸಾತ್ ಟವರ್‌ನಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಅಸೈಯದ್ ಇಂಬಿಚ್ಚಿಕೋಯ ತಂಙಲ್ ಬಾಯಾರ್, ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘಟನೆಯ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿರುವರು. ಕೆ.ಸಿ.ಎಫ್ ಶಾರ್ಜಾ ಝೋನ್ ವತಿಯಿಂದ ಬುರ್ದಾ ಹಾಗೂ ಮುಹಿಯುದ್ದೀನ್ ಮಾಲಾ ಆಲಾಪನೆಯೂ ನಡೆಯಲಿದೆ. ಇತ್ತೀಚೆಗೆ ನಿಧನರಾದ ಕೆ.ಎಚ್.ಅಹ್ಮದ್ ಫೈಝಿ ಉಸ್ತಾದ್‌ರ ಹೆಸರನ್ನು ವೇದಿಕೆಗೆ ಇಡಲು ಉದ್ದೇಶಿಸಲಾಗಿದೆ  ಎಂದು ಪ್ರಕಟನೆ ತಿಳಿಸಿದೆ.

 

Comments (Click here to Expand)