varthabharthi

ಸಿನಿಮಾ

ಬಾಹುಬಲಿ 2 ಅನ್ನು ಹಿಂದಿಕ್ಕಿ 2017ರ ‘ವರ್ಷದ ಚಿತ್ರ’ ಗೌರವಕ್ಕೆ ಪಾತ್ರವಾಗಿದೆ ಈ ಚಿತ್ರ

ವಾರ್ತಾ ಭಾರತಿ : 21 Dec, 2017

ಚೆನ್ನೈ, ಡಿ.21: ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರ 2017ರಲ್ಲಿ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾರತ ಚಿತ್ರರಂಗದ ಕಮರ್ಶಿಯಲ್ ಚಿತ್ರಗಳಲ್ಲಿ ಒಂದಾಗಿರುವ ಬಾಹುಬಲಿ 2 ಹಲವು ದಾಖಲೆಗಳನ್ನು ಸೃಷ್ಟಿಸಿತ್ತು. ನಟ ಪ್ರಭಾಸ್ ವೃತ್ತಿ ಜೀವನದ ಅತ್ಯುತ್ತಮ ಚಿತ್ರ ಎಂಬ ಖ್ಯಾತಿಯೂ ಬಾಹುಬಲಿ 2ಕ್ಕೆ ಇದೆ.

ಆದರೆ 2017ರ ವರ್ಷದ ಚಿತ್ರ ಗೌರವಕ್ಕೆ ಬಾಹುಬಲಿ 2 ಪಾತ್ರವಾಗಿಲ್ಲ. ರಾಜಮೌಳಿ ನಿರ್ದೇಶನದ ಮೆಗಾ ಬ್ಲಾಕ್ ಬಸ್ಟರ್ ಚಿತ್ರವನ್ನು ಹಿಂದಿಕ್ಕಿ 2017ರ ವರ್ಷದ ಚಿತ್ರ ಗೌರವಕ್ಕೆ ಪಾತ್ರವಾಗಿರುವುದು ಮಾಧವನ್ ಹಾಗು ವಿಜಯ್ ಸೇತುಪತಿ ನಟನೆಯ ತಮಿಳು ಸೂಪರ್ ಹಿಟ್ ಚಿತ್ರ ‘ವಿಕ್ರಂ ವೇದ’.

2017ರ ಟಾಪ್ 10 ಚಿತ್ರಗಳ ಪಟ್ಟಿಯನ್ನು IMDB ಬಿಡುಗಡೆ ಮಾಡಿದ್ದು, ವಿಕ್ರಂ ವೇದ ಮೊದಲ ಸ್ಥಾನದಲ್ಲಿದೆ.

ಪುಷ್ಕರ್-ಗಾಯತ್ರಿ ದಂಪತಿ ನಿರ್ದೇಶಿಸಿದ್ದ ವಿಕ್ರಂ ವೇದ ತಮಿಳು ಚಿತ್ರರಂಗದ ಅತ್ಯುತ್ತಮ ಚಿತ್ರಗಳಲ್ಲೊಂದು. ಒಬ್ಬ ಗ್ಯಾಂಗ್ ಸ್ಟರ್ ಹಾಗು ಪೊಲೀಸ್ ಅಧಿಕಾರಿಯ ನಡುವಿನ ಸಂಘರ್ಷದ ಕತೆಯನ್ನು ಈ ಚಿತ್ರ ಒಳಗೊಂಡಿದೆ. ವಿಭಿನ್ನ ಚಿತ್ರಕಥೆ ಹಾಗು ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯ ಈ ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದು, ಚಿತ್ರವು ವಿಮರ್ಶಕರಿಂದಲೂ, ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿತ್ತು.

IMDB ಬಿಡುಗಡೆಗೊಳಿಸಿರುವ 2017ರ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಬಾಲಿವುಡ್ ನ 4 ಚಿತ್ರಗಳಿವೆ.

IMDB ಬಿಡುಗಡೆಗೊಳಿಸಿರುವ 2017ರ ಟಾಪ್ 10 ಚಿತ್ರಗಳ ಈ ಕೆಳಗಿನಂತಿದೆ.

1.ವಿಕ್ರಮ್ ವೇದ

2. ಬಾಹುಬಲಿ 2

3.ಅರ್ಜುನ್ ರೆಡ್ಡಿ

4.ಸೀಕ್ರೆಟ್ ಸೂಪರ್ ಸ್ಟಾರ್

5.ಹಿಂದಿ ಮೀಡಿಯಂ

6.ದ ಗಾಝಿ ಅಟ್ಯಾಕ್

7.ಟಾಯ್ಲೆಟ್-ಏಕ್ ಪ್ರೇಮ್ ಕಥಾ

8.ಜಾಲಿ ಎಲ್ ಎಲ್ ಬಿ 2

9.ಮೆರ್ಸಲ್

10.ದ ಗ್ರೇಟ್ ಫಾದರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)