varthabharthi

ಗಲ್ಫ್ ಸುದ್ದಿ

ಹೌದಿ ನೆಲೆಗಳ ಮೇಲೆ ಸೌದಿ ನೇತೃತ್ವದ ಮಿತ್ರಪಡೆಗಳ ದಾಳಿ

ವಾರ್ತಾ ಭಾರತಿ : 21 Dec, 2017

ಸಾಂದರ್ಭಿಕ ಚಿತ್ರ

ಸನಾ (ಯಮನ್), ಡಿ. 21: ಯಮನ್‌ನ ಹೌದಿ ಬಂಡುಕೋರರು ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನತ್ತ ಪ್ರಕ್ಷೇಪಕ ಕ್ಷಿಪಣಿಯೊಂದನ್ನು ಹಾರಿಸಿದ ಒಂದು ದಿನದ ಬಳಿಕ, ಸೌದಿ ನೇತೃತ್ವದ ಮೈತ್ರಿ ಪಡೆಗಳು ಬುಧವಾರ ಯಮನ್ ಮೇಲೆ ಹಲವಾರು ವಾಯು ದಾಳಿಗಳನ್ನು ನಡೆಸಿವೆ.

ಹೌದಿ ಬಂಡುಕೋರರ ಭದ್ರಕೋಟೆ ಸಾಡದ ಮೇಲೆ ನಡೆದ ವಾಯು ದಾಳಿಯಲ್ಲಿ 11 ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಓರ್ವ ಬುಡಕಟ್ಟು ಮುಖ್ಯಸ್ಥ ಹಾಗೂ ಇತರ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ನಿವಾಸವನ್ನು ಗುರಿಯಾಗಿಸಿ ಹೌದಿ ಬಂಡುಕೋರರು ಕ್ಷಿಪಣಿ ಹಾರಿಸಿದ್ದರು. ಆದರೆ, ಅದನ್ನು ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಮೂಲಕ ಅರ್ಧದಲ್ಲೇ ತುಂಡರಿಸಲಾಗಿತ್ತು.

ಈ ಘಟನೆಯ ಹಿನ್ನೆಲೆಯಲ್ಲಿ, ಬುಧವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅಮೇರಿಕದ ದೊರೆ ಸಲ್ಮಾನ್ ಜೊತೆ ಫೋನ್‌ನಲ್ಲಿ ಮಾತನಾಡಿದರು.

 

Comments (Click here to Expand)