varthabharthi

ಸಿನಿಮಾ

ಸದ್ದು ಮಾಡುತ್ತಿರುವ ಐಯಾರಿ ಟ್ರೇಲರ್

ವಾರ್ತಾ ಭಾರತಿ : 22 Dec, 2017

‘ಎವೆಡ್‌ನಸ್‌ಡೇ’, ‘ಸ್ಪೆಶಲ್ 26’, ‘ಬೇಬಿ’ ಹಾಗೂ ‘ಎಂ.ಎಸ್.ಧೋನಿ - ಅನ್‌ಟೋಲ್ಡ್ ಸ್ಟೋರಿ’ಯಂತಹ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರುವ ಚಿತ್ರಸಾಹಿತಿ-ನಿರ್ದೇಶಕ ನೀರಜ್ ಪಾಂಡೆ, ‘ಐಯಾರಿ’ ಚಿತ್ರದ ಮೂಲಕ ಮತ್ತೆ ಬಾಲಿವುಡ್‌ಗೆ ವಾಪಸಾಗಿದ್ದಾರೆ. ಮನೋಜ್ ಬಾಜಪೇಯಿ, ಸಿದ್ಧಾರ್ಥ ಮಲ್ಹೋತ್ರಾ ಅಭಿನಯದ ಈ ಬಹುನಿರೀಕ್ಷಿತ ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ವೀಕ್ಷಿಸಿದವರು ಈ ಚಿತ್ರ ಕೂಡಾ ನೀರಜ್ ಪಾಂಡೆಯವರ ‘ಎ ವೆಡ್‌ನಸ್‌ಡೇ’, ‘ಬೇಬಿ’ ಚಿತ್ರಗಳಂತೆ ಬಾಲಿವುಡ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಐಯಾರಿ ಚಿತ್ರವು ಕರ್ನಲ್ ಅಭಯ್‌ಸಿಂಗ್ (ಮನೋಜ್ ಬಾಜಪಾಯಿ) ಹಾಗೂ ಮೇಜರ್ ಜಯಭಕ್ಷಿ (ಸಿದ್ಧಾರ್ಥ ಮಲ್ಹೋತ್ರಾ) ಎಂಬ ಇಬ್ಬರು ಸೇನಾಧಿಕಾರಿಗಳ ಕತೆ ಹೇಳುತ್ತದೆ. ಗಾಢವಾದ ದೇಶಭಕ್ತಿಯುಳ್ಳ ಈ ಇಬ್ಬರು ಸೇನಾಧಿಕಾರಿಗಳ ನಡುವೆ ಸಂಘರ್ಷ ತಲೆದೋರುತ್ತದೆ. ಇದರ ಪರಿ ಣಾಮವಾಗಿ ಮೇಜರ್ ಜಯಭಕ್ಷಿ ಅಡ್ಡದಾರಿ ಹಿಡಿದು, ಹಿಂಸೆ ಮಾರ್ಗದಲ್ಲಿ ಸಾಗುತ್ತಾನೆ. ಆನಂತರ ಏನಾಗಲಿದೆಯೆಂಬುದನ್ನು ಚಿತ್ರ ಮಂದಿರಗಳಲ್ಲಿ ಐಯಾರಿ ಬಿಡುಗಡೆಯ ಬಳಿಕವೇ ಬಹಿರಂಗವಾಗಲಿದೆ. ನಸೀರುದ್ದೀನ್ ಶಾ, ಅನುಪಮ್ ಖೇರ್, ರಾಕುಲ್ ಪ್ರೀತ್, ಪೂಜಾ ಚೋಪ್ರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬೇಹುಗಾರಿಕೆಯ ಥ್ರಿಲ್ಲರ್ ಕಥಾವಸ್ತುವಿರುವ ಈ ಚಿತ್ರವು ಜನವರಿ 26ರಂದು ಗಣರಾಜ್ಯೋತ್ಸವದ ವೇಳೆ ಬಿಡುಗಡೆಯಾಗಲಿದೆ. ಅಂದಹಾಗೆ ಅಕ್ಷಯ್ ನಟಿಸಿರುವ ‘ಪ್ಯಾಡ್ ಮ್ಯಾನ್’ ಕೂಡಾ ಅದೇ ದಿನ ಬಿಡುಗಡೆಯಾಗಲಿದ್ದು, ಈ ಎರಡು ಚಿತ್ರಗಳ ನಡುವೆ ಬಾಕ್ಸ್‌ಆಫೀಸ್ ಕದನ ನಡೆಯುವುದು ಖಚಿತವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)