varthabharthi

ಸಿನಿಮಾ

ರಾಜ್ ಪುತ್ರರ ಮಹಾಸಂಗಮ

ವಾರ್ತಾ ಭಾರತಿ : 22 Dec, 2017

ವರನಟ ರಾಜ್‌ಕುಮಾರ್ ರ ಮೂವರು ಪುತ್ರರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ?. ಹಾಗಂತ ಶಿವರಾಜ್‌ಕುಮಾರ್, ಪುನೀತ್ ರಾಜ್ ಸಣ್ಣ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ. ಇದೇ ಪ್ರಥಮ ಬಾರಿಗೆ ಫೇಸ್‌ಬುಕ್ ಲೈವ್‌ನಲ್ಲಿ ಈ ಇಬ್ಬರು ಸಹೋದರರು ಜೊತೆಯಾಗಿ ಅಭಿಮಾನಿಗಳ ಜೊತೆ ಸಂವಹನ ನಡೆಸಿದ ವೇಳೆ, ತಮ್ಮ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪುನೀತ್ ಹಾಗೂ ತಾನು ನಟಿಸಲಿರುವ ಈ ಚಿತ್ರದಲ್ಲಿ, ಇನ್ನೋರ್ವ ಸೋದರ ರಾಘವೇಂದ್ರ ರಾಜ್‌ಕುಮಾರ್ ಕೂಡಾ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆಂದು ಶಿವರಾಜ್ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಾನು ಚಿತ್ರಕಥೆ ಆಲಿಸಿದ್ದು, ಮೂವರು ಸಹೋದರರಿಗೂ ಜೊತೆಯಾಗಿ ನಟಿಸಲು ಅತ್ಯಂತ ಸೂಕ್ತವಾದ ಕಥಾವಸ್ತು ಇದಾಗಿದೆಯೆಂದಿದ್ದಾರೆ. ಆದಾಗ್ಯೂ, ಚಿತ್ರದ ಬಗ್ಗೆ ಪುನೀತ್ ಜೊತೆ ಕೂಲಂಕುಷವಾಗಿ ಚರ್ಚಿಸಲಿದ್ದೇನೆ. ಆತ ಒಕೆ ಅಂದಲ್ಲಿ ಖಂಡಿತವಾ ಗಿಯೂ ಚಿತ್ರ ಸೆಟ್ಟೇರಲಿದೆ ಎಂದು ಶಿವರಾಜ್ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಸುದ್ದಿಯು ಲಕ್ಷಾಂತರ ಅಭಿಮಾನಿಗಳನ್ನು ಪುಳಕಿತಗೊಳಿಸಿದೆ. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರು ಈ ಬಗ್ಗೆ ಚರ್ಚಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ನಿರ್ಮಾಣ ಆರಂಭವಾಗಲೆಂದು ಹಾರೈಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)