varthabharthi

ಸಿನಿಮಾ

ಶಾರುಖ್ ಖಾನ್ ಗೆ ಟ್ವಿಟರ್ ನಲ್ಲಿ ಮೆಚ್ಚುಗೆ ಸೂಚಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ!

ವಾರ್ತಾ ಭಾರತಿ : 24 Dec, 2017

ಹೊಸದಿಲ್ಲಿ, ಡಿ.24: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ತನ್ನ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಶಾರೂಕ್ ಗೆ ಇದೀಗ WWE ಸ್ಟಾರ್ ಜಾನ್ ಸೀನ ಮೆಚ್ಚುಗೆ ಸೂಚಿಸಿದ್ದಾರೆ.

ಶಾರೂಕ್ ಖಾನ್ ‘ಟೆಡ್ ಟಾಕ್ಸ್ ನಯೀ ಸೋಚ್’ ಎನ್ನುವ ಶೋ ಒಂದನ್ನು ನಡೆಸುತ್ತಿದ್ದು, ಡಿಸೆಂಬರ್ 10ರಂದು ಅದರ ಮೊದಲ ಎಪಿಸೋಡ್ ಪ್ರಸಾರವಾಗಿದೆ. ಈ ಎಪಿಸೋಡನ್ನು ಲಕ್ಷಾಂತರ ಭಾರತೀಯರು ಮೆಚ್ಚಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ WWE ಸ್ಟಾರ್ ಜಾನ್ ಸೀನ ಟೆಡ್ ಡಾಟ್ ಕಾಂ ನ ಲಿಂಕ್ ಒಂದನ್ನು ಟ್ವೀಟ್ ಮಾಡಿದ್ದು, “@theCHIVE  ಈ ಬಗ್ಗೆ ಸಣ್ಣ ಲೇಖನವೊಂದನ್ನು ಪ್ರಕಟಿಸಿತ್ತು. ನಾನಿದಕ್ಕೆ ಮನಸೋತಿದ್ದೇನೆ” ಎಂದಿದ್ದರು.

ಈ ಬಗ್ಗೆ ಶಾರೂಕ್ ಖಾನ್ ಜಾನ್ ಸೀನರ ಪ್ರಸಿದ್ಧ “ಯು ಕಾಂಟ್ ಸೀ ಮಿ” ಪದವನ್ನು ಬಳಸಿ ಟ್ವೀಟ್ ಮಾಡಿದ್ದಾರೆ. “ಅದನ್ನು 'ನೋಡಲು' ಸಮಯ ತೆಗೆದುಕೊಂಡದ್ದಕ್ಕೆ ಧನ್ಯವಾದಗಳು. ಎಂದಾದರೂ ನಾನು ನಿಮ್ಮನ್ನು 'ನೋಡಲು' ಬಯಸುತ್ತೇನೆ” ಎಂದು ಶಾರೂಕ್ ಜಾನ್ ಸೀನಾಗೆ ಪ್ರತಿಕ್ರಿಯಿಸಿದ್ದಾರೆ.

ಶಾರೂಕ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಜಾನ್ ಸೀನ, “ಬದುಕಿನ ಕುರಿತಾದ ನಿಮ್ಮ ದೃಷ್ಟಿಕೋನವನ್ನು ನಾನು ಹೊಂದಲು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)