varthabharthi

ಓ ಮೆಣಸೇ

ಓ ಮೆಣಸೇ..

ವಾರ್ತಾ ಭಾರತಿ : 25 Dec, 2017
ಪಿ.ಎ.ರೈ

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೌರಿಲಂಕೇಶ್ ಹಂತಕರ ಬಂಧನ. - ರಾಜನಾಥ್ ಸಿಂಗ್, ಕೇಂದ್ರ ಸಚಿವ ಆದರೆ ಗೌರಿ ಲಂಕೇಶರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದು ಇಷ್ಟವಿರಲಿಲ್ಲ.

---------------------

ಕಂಬಳದಲ್ಲಿ ಕೋಣಗಳನ್ನು ಓಡಿಸುತ್ತಾರೆ ವಿನಃ ನೋವು ಮಾಡುವುದಿಲ್ಲ. - ವಜುಭಾಯಿವಾಲಾ, ರಾಜ್ಯಪಾಲ
  ಪ್ರಾಯೋಗಿಕವಾಗಿ ನಿಮ್ಮನ್ನು ಒಮ್ಮೆ ಓಡಿಸಿ ನೋಡೋಣವೇ?

---------------------

ಹಿಂದುತ್ವ ಎನ್ನುವುದರ ಅರ್ಥ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವುದು. - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ ಮತ್ತು ಮನುಸಿದ್ಧಾಂತದ ಪ್ರಕಾರ ಕೆಲಸಗಳನ್ನು ವಿಂಗಡಿಸುವುದು.

---------------------

ಸ್ವಾತಂತ್ರಾನಂತರ ಬಡವ-ಶ್ರೀಮಂತರ ಅಂತರ ತಗ್ಗಿದೆ. - ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ತಗ್ಗಿದ ಅಂತರವನ್ನು ಹೆಚ್ಚಿಸಲು ಎಲ್ಲ ಪ್ರಯತ್ನಗಳೂ ಕೇಂದ್ರದಿಂದ ನಡೆಯುತ್ತಿವೆ.

---------------------

ಸಿದ್ದರಾಮಯ್ಯ ಮತ್ತು ನಾನು ಒಂದೇ ನೊಗ ಹೊತ್ತ ಜೋಡೆತ್ತಿನಂತೆ.
- ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಅಧ್ಯಕ್ಷ
ನಿಮ್ಮನ್ನು ಹೊತ್ತು ಸಿದ್ದರಾಮಯ್ಯ ಚುನಾವಣಾ ಗದ್ದೆಯಲ್ಲಿ ಓಡಬೇಕಾಗಿದೆ ಎನ್ನುವುದು ಸದ್ಯದ ಸಮಸ್ಯೆ.

---------------------

ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದಿಂದ ಸಿದ್ದರಾಮಯ್ಯರಿಗೆ ನಿದ್ದೆಯಲ್ಲೂ ಮೋದಿ ಭಯ ಶುರುವಾಗಿದೆ. - ನಳಿನ್‌ಕುಮಾರ್ ಕಟೀಲು, ಸಂಸದ
ಸದ್ಯಕ್ಕೆ ದೇಶದ ಪ್ರಜೆಗಳೆಲ್ಲ ನಿದ್ದೆಯಲ್ಲೂ ಮೋದಿಗೆ ಹೆದರ ತೊಡಗಿದ್ದಾರೆ.

---------------------

ಮನುಷ್ಯ -ಮನುಷ್ಯರನ್ನು ಪ್ರೀತಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. - ರಮಾನಾಥ ರೈ, ಸಚಿವ
ಹೀಗಾದಲ್ಲಿ ಮನುಷ್ಯನನ್ನು ಯಂತ್ರಗಳ ಮೂಲಕವೇ ಸೃಷ್ಟಿಸಬೇಕಾಗಬಹುದು.

---------------------

ಗುಜರಾತ್ ಫಲಿತಾಂಶಕ್ಕೆ ನಾವು ಹೆದರುವುದಿಲ್ಲ. - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅಲ್ಲಿ ಜೆಡಿಎಸ್ ಚುನಾವಣೆಗೆ ಸ್ಪರ್ಧಿಸಿಲ್ಲ ಎಂಬ ಧೈರ್ಯ.

---------------------

ಕರ್ನಾಟಕ ಭಯೋತ್ಪಾದಕರನ್ನ್ನು ತಯಾರು ಮಾಡುವ ಕೇಂದ್ರ. - ಪ್ರಹ್ಲಾದ್ ಜೋಶಿ, ಸಂಸದ
ಅನಂತಕುಮಾರ್ ಹೆಗಡೆಗೆ ಆ ಕೇಂದ್ರದ ಉಸ್ತುವಾರಿಯನ್ನು ನೀಡಲಾಗಿದೆ.

---------------------

ಗುಜರಾತ್ ಚುನಾವಣೆಯಲ್ಲಿ ರಾಹುಲ್ ಶ್ರಮವನ್ನು ಅಯ್ಯರ್, ಸಿಬಲ್ ಮಣ್ಣುಪಾಲು ಮಾಡಿದರು. - ವೀರಪ್ಪ ಮೊಯ್ಲಿ, ಸಂಸದ
ನೀವೇನು ಮಾಡಿದ್ದೀರಿ ಅದನ್ನು ಹೇಳಿ.

---------------------

ಗುಜರಾತ್ ಗೆಲುವು ಸುಲಭವಾಗಿ ದಕ್ಕಿದ್ದಲ್ಲ. - ನರೇಂದ್ರ ಮೋದಿ, ಪ್ರಧಾನಿ
ಇವಿಎಂ ತಿರುಚುವುದು ಸುಲಭದ ಕೆಲಸ ಅಲ್ಲ.

---------------------

ಸಿಎಂ ಸಿದ್ದರಾಮಯ್ಯರನ್ನು ಕಂಡರೆ ಮೋದಿ ನಡುಗುತ್ತಾರೆ - ಎಂ.ಬಿ.ಪಾಟೀಲ್, ಸಚಿವ
ಅದಕ್ಕೆ ರಾಜ್ಯ ಚುನಾವಣೆಯನ್ನು ಬೇಸಿಗೆ ಕಾಲದಲ್ಲಿ ಇಡಲು ಆಯೋಗ ನಿರ್ಧರಿಸಿದೆ.

---------------------

ಗಾಳಿ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ - ಬಾಬಾರಾಮ್‌ದೇವ್, ಯೋಗಗುರು
ಗಾಳಿಯ ಜೊತೆಗೆ ಮಳೆಯೂ ಸುರಿದರೆ ಕಷ್ಟ.

---------------------

ತಪ್ಪು ವ್ಯಕ್ತಿಗಳ ಕೈಗೆ ಅಧಿಕಾರ ನೀಡಿದರೆ ಏನೆಲ್ಲಾ ಆಗಬಹುದು ಎನ್ನುವುದನ್ನು ಕರ್ನಾಟಕದಲ್ಲಿ ನೋಡಬಹುದು. - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ

ಕರ್ನಾಟಕದ ಜನರು ಅದನ್ನು ಉತ್ತರಪ್ರದೇಶದಲ್ಲಿ ಈಗಾಗಲೇ ನೋಡಿದ್ದಾರೆ.

---------------------

ನಾವು ಮಾಡಿದ ಕೆಲಸಕ್ಕೆ ಕೂಲಿಯಾಗಿ ನಮಗೆ ಮತ ನೀಡಿ - ಸಿದ್ದರಾಮಯ್ಯ, ಮುಖ್ಯಮಂತ್ರಿ

ಅದಕ್ಕಾಗಿ ಪ್ರತೀ ತಿಂಗಳು ಪಡೆಯುವ ವೇತನ, ಭತ್ತೆ ಎಲ್ಲವನ್ನು ಏನು ಮಾಡಿದಿರಿ?

---------------------

ಕಾಂಗ್ರೆಸ್ ಸರಕಾರ ಕರ್ನಾಟಕವನ್ನು ಕಾಶ್ಮೀರ ಮಾಡಿದೆ - ಮುರಳೀಧರ ರಾವ್, ಬಿಜೆಪಿ ರಾಜ್ಯ ಉಸ್ತುವಾರಿ
ಆದುದರಿಂದ ರಾಜ್ಯದಲ್ಲಿ ಪಿಡಿಪಿಯ ಜೊತೆಗೆ ಸೇರಿ ಆಡಳಿತ ಮಾಡಬೇಕು ಎಂದು ನಿರ್ಧರಿಸಿದ್ದೀರಾ?

---------------------

ರಾಜ್ಯದ ನೆಲ, ಜಲ, ಭಾಷೆ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ - ಎಂ.ಬಿ.ಪಾಟೀಲ್, ಸಚಿವ
ಸದ್ಯಕ್ಕೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಹೆಚ್ಚು ಲಾಭದಾಯಕ.

---------------------

ಕರ್ನಾಟಕದಲ್ಲಿ ಬಿಜೆಪಿಯ ಆಟ ನಡೆಯೋದಿಲ್ಲ - ಡಿ.ಕೆ.ಶಿವಕುಮಾರ್, ಸಚಿವ
 ಅವರು ಆಟ ಆಡುವುದಕ್ಕೆ ಬಂದವರಂತೆ ಕಾಣುತ್ತಿಲ್ಲ.

---------------------

ರಾಜ್ಯದಲ್ಲಿ ಬೋಗಸ್ ಪಡಿತರ ಚೀಟಿ ಬಗ್ಗೆ ಮಾಹಿತಿ ನೀಡಿದವರಿಗೆ 400 ರೂ. ಇನಾಮು - ಯು.ಟಿ.ಖಾದರ್, ಸಚಿವ
ನೀಡದೇ ಇದ್ದರೆ ದುಪ್ಪಟ್ಟು ಕೊಡುತ್ತೇವೆ ಎಂದು ಬೋಗಸ್ ಜನಗಳು ಘೋಷಿಸಿದ್ದಾರಂತೆ.

---------------------

2ಜಿ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಒಂದು ಪಾಠವಾಗಿ ಸ್ವೀಕರಿಸಬೇಕು - ಸುಬ್ರಮಣಿಯನ್ ಸ್ವಾಮಿ, ಸಂಸದ
ಪಾಠಕ್ಕಿಂತ ರಾಜಕೀಯ ಆಟವೇ ಎದ್ದು ಕಾಣುತ್ತಿದೆ.

---------------------

ಬಿಜೆಪಿಯ ಪರಿವರ್ತನಾ ಯಾತ್ರೆ ಇತಿಹಾಸ ನಿರ್ಮಿಸಲಿದೆ. - ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ
ಬಿಜೆಪಿಗರ ಪಾಲಿಗೆ ದುರಂತ ಇತಿಹಾಸವನ್ನೇ ನಿರ್ಮಾಣ ಮಾಡುವ ಸಾಧ್ಯತೆ ಇದೆ.

---------------------

ಝಮೀರ್ ಅಹ್ಮದ್‌ರಂತಹವರು ಬಿಟ್ಟು ಹೋದ ಮೇಲೆ ನಮ್ಮ ಪಕ್ಷ ಸಶಕ್ತವಾಗಿದೆ - ಮಧು ಬಂಗಾರಪ್ಪ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ
ಝಮೀರ್ ಅಹ್ಮದ್‌ಗಿಂತ ದೊಡ್ಡ ದುಡ್ಡಿನ ಕುಳ ಸಿಕ್ಕಿರಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು