varthabharthi

ವಿಶೇಷ-ವರದಿಗಳು

► ತಗ್ಗಿನಿಂದ ಎತ್ತರ ಪ್ರದೇಶಕ್ಕೆ ನೀರು ಹರಿಸುವ ನೂತನ ಪ್ರಯತ್ನ! ► ಅವೈಜ್ಞಾನಿಕ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ

ತುಂಬೆಯ ಬಳಿ ನಿರ್ಮಾಣವಾಗುತ್ತಿದೆ ವಿಶೇಷ ಒಳಚರಂಡಿ!

ವಾರ್ತಾ ಭಾರತಿ : 25 Dec, 2017
ಅಬ್ದುಲ್ ರಹಿಮಾನ್ ತಲಪಾಡಿ

ಬಂಟ್ವಾಳ, ಡಿ. 24: ತಗ್ಗಿನಿಂದ ಎತ್ತರ ಪ್ರದೇಶಕ್ಕೆ ಒಳಚರಂಡಿ ಮೂಲಕ ಹೇಗಪ್ಪ ನೀರು ಹರಿಸು ವುದು? ಎಂದು ಆಶ್ಚರ್ಯಪಡಬೇಡಿ. ಲಕ್ಷಾಂತರ ರೂ. ವೆಚ್ಚದಲ್ಲಿ ತುಂಬೆ ಬಳಿ ನಿರ್ಮಾಣ ವಾಗುತ್ತಿದೆ ಇಂತಹದ್ದೇ ವಿಶೇಷ ಒಳಚರಂಡಿ ಕಾಮಗಾರಿ.

ಆದರೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಬಿಎ ಕಾಲೇಜು ಬಳಿ ನಿರ್ಮಾಣವಾಗುತ್ತಿರುವ ಒಳಚರಂಡಿ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕದಿಂದ ಕೂಡಿದೆ. ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ತುಂಬೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಲ್ಲದೆ ತುಂಬೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಕಾಮ ಗಾರಿ ಅವೈಜ್ಞ್ಞಾನಿಕದಿಂದ ಕೂಡಿದ್ದು, ಅಪಾಯಕಾರಿ ತಿರುವನ್ನು ಹೊಂದಿದೆ. ತುಂಬೆಯ ತಿರುವಿನ ಒಂದು ಬದಿ ತಗ್ಗಾಗಿದ್ದು, ಮಳೆ ನೀರು ರಸ್ತೆಯಲ್ಲಿಯೇ ಶೇಖರಣೆಗೊಂಡು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಕೃತಕ ನೆರೆ, ಹೊಂಡ ಉಂಟಾಗಿ ಭೀತಿ ಮೂಡಿಸುತ್ತದೆ. ಈ ಹೊಂಡಕ್ಕೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಅನೇಕ ಘಟನೆಗಳು ನಡೆದಿವೆೆ.

 ಈ ಹಿನ್ನೆಲೆಯಲ್ಲಿ ಇಲ್ಲಿ ಜೆಸಿಬಿ ಮೂಲಕ ತೋಡು ನಿರ್ಮಿ ಸಲಾಗಿತ್ತು. ಕಾಲಕ್ರಮೇಣ ಗುಡ್ಡಪ್ರದೇಶದಿಂದ ಮಣ್ಣುಬಿದ್ದು ಮುಚ್ಚಿಹೋಗಿತ್ತು. ಬಳಿಕ ರಸ್ತೆಯ ಬದಿಯಲ್ಲಿ ಪಂಪ್‌ಸೆಟ್ ನೆರವಿನಿಂದ ತಗ್ಗು ಪ್ರದೇಶಕ್ಕೆ ನೀರು ಹರಿಸುವ ಪ್ರಯತ್ನವೂ ನಡೆದಿತ್ತು. ಈ ಬಗ್ಗೆ ಪ್ರತಿಭಟನೆಗಳು ನಡೆದ ಬಳಿಕ ಈ ಬಾರಿ ಚರಂಡಿ ನಿರ್ಮಾಣಕ್ಕೆ ಮುಂದಾಗಿದೆ. ಪಣಂಬೂರಿನ ಆರ್‌ಪಿಪಿ ಸಂಸ್ಥೆಯೊಂದು ಈ ಒಳಚರಂಡಿ ಕಾಮಗಾರಿಯನ್ನು ಗುತ್ತಿಗೆ ಪಡೆದು ಕೊಂಡಿದ್ದು, ಕಳೆದ ನಾಲ್ಕೈದು ತಿಂಗಳಿನಿಂದ ಇದರ ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆ ಸುತ್ತಿದ್ದು, ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕ ವಾಗಿದೆ. ಅಲ್ಲದೆ ಇದರ ಹೆಚ್ಚಿನ ಕೆಲಸಗಳು ನಡೆಯು ವುದು ರಾತ್ರಿಹೊತ್ತು ಎಂದು ಸಾರ್ವಜನಿ ಕರಿಂದ ದೂರು ಕೇಳಿಬರುತ್ತಿದೆ.

ಈಗಾಗಲೇ ನಿರ್ಮಿಸುತ್ತಿರುವ ಚರಂಡಿಗಳಿಗೆ ಸಮಯಕ್ಕೆ ಸರಿಯಾಗಿ ನೀರುಣಿಸದೆ ಇರು ವುದರಿಂದ ಕಳಪೆ ಮಟ್ಟದ ಕಾಮಗಾರಿ ನಡೆಯು ತ್ತಿದೆ. ಕಾಮಗಾರಿ ವೀಕ್ಷಿಸಲು ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಇತ್ತ ಬರುತ್ತಿಲ್ಲ. ರಸ್ತೆಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿ ಒಳಚರಂಡಿ ನಿರ್ಮಾಣ ಮಾಡುವುದು ಅಧಿ ಕಾರಿಗಳ ಜವಾಬ್ದಾರಿ. ಆದರೆ ಇದಕ್ಕೂ ತಮಗೂ ಯಾವುದೇ ರೀತಿಯಿಂದ ಸಂಬಂಧವೇ ಇಲ್ಲ ಎಂಬಂತೆ ಅವರು ವರ್ತಿಸುತ್ತಿದ್ದಾರೆ ಎಂದು ಸ್ಥಳೀಯ ನಝೀರ್ ಎಂಬ ವರು ಆರೋಪಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮಕೈಗೊಂಡು ಗುಣಮಟ್ಟದ ರಸ್ತೆ ಮತ್ತು ಒಳ ಚರಂಡಿ ನಿರ್ಮಿಸಬೇಕು. ಬೇಜವಾಬ್ದಾರಿ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹಿರಿಯ ಇಂಜಿನಿಯಗಳ ಸಲಹೆ ಹಾಗೂ ಮಾರ್ಗ ದರ್ಶನದ ಮೇರೆಗೆ ಒಳ ಚರಂಡಿ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ನಿಯಮಾವಳಿಗೆ ಅನುಸಾರ ವಾಗಿ ಈ ಕಾಮಗಾರಿ ನಡೆ ಯುತ್ತಿದೆ. ಇಲ್ಲಿನ ಬಂಡೆಕಲ್ಲುಗಳನ್ನು ತೆರವು ಮಾಡಲು ಅನುಮತಿಯಿಲ್ಲ. ಇದನ್ನು ಡ್ರಿಲ್ ಮಿಷನ್‌ನಿಂದ ತೆಗೆಯು ವುದು ಕಷ್ಟ. ಅಲ್ಲದೆ ಸುತ್ತಮುತ್ತ ಮನೆಗ ಳಿರುವುದರಿಂದ ಬಂಡೆಕಲ್ಲನ್ನು ಸ್ಫೋಟಿ ಸುವುದು ಅಪಾ ಯಕಾರಿ. ಅದಕ್ಕಾಗಿ ಬಂಡೆಕಲ್ಲನ್ನು ತೂತು ಮಾಡಿ, ಕಬ್ಬಿಣದ ರಾಡ್‌ನ್ನು ಅಳವಡಿಸಿ ಒಳಚರಂಡಿ ನಿರ್ಮಿಸಲಾಗುತ್ತಿದೆ.

► ರೇವಂತ್ ಸಹಾಯಕ ಇಂಜಿನಿಯರ್

ಇಂಜಿನಿಯರ್‌ಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡದೆ ಈ ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ಇದೊಂದು ನಿಷ್ಕ್ರಿಯ ಯೋಜನೆಯಾಗಿದ್ದು, ಸರಕಾರದ ಅನುದಾನ ವ್ಯರ್ಥವಾಗುತ್ತಿದೆ. ಅಲ್ಲದೆ ಈ ಕಾಮ ಗಾರಿಯ ಗುಣಮಟ್ಟವೂ ಸಂಪೂರ್ಣವಾಗಿ ಕಳಪೆಯಾಗಿದೆ. ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸುವ ಮೂಲಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

►  ಟಿ. ಅಝೀಝ್, ತುಂಬೆ ಗ್ರಾಪಂ ಮಾಜಿ ಸದಸ್ಯ

ಮಳೆಗಾಲದಲ್ಲಿ ಎಲ್ಲೆಲ್ಲಿ ಅಪಾಯ?

ಬಂಟ್ವಾಳ ತಾಲೂಕು ವ್ಯಾಪ್ತಿಯ ಪರಂಗಿಪೇಟೆಯಿಂದ ಮಾಣಿ ತನಕ ಹತ್ತಕ್ಕೂ ಅಧಿಕ ಕೃತಕ ನೆರೆ ಸೃಷ್ಟಿಯಾಗುವ ಅಪಾಯಕಾರಿ ಸ್ಥಳಗಳಿವೆ. ಅವುಗಳಲ್ಲಿ ತುಂಬೆ ಬಿಎ ಕಾಲೇಜು, ಶಾಂತಿ ಅಂಗಡಿ, ಬಿ.ಸಿ.ರೋಡ್ ಬೆಸ್ಟ್ ಸ್ಕೂಲ್ ಮುಂಭಾಗ, ಪದ್ಮಾ ಪೆಟ್ರೋಲ್ ಪಂಪ್ ಎದುರು, ಬಿ.ಸಿ.ರೋಡ್ ಗಣೇಶ್ ಮೆಡಿಕಲ್ ಎದುರು, ಬಿಎಸ್ಸೆನ್ನೆಲ್ ಕಚೇರಿ ಮುಂಭಾಗ, ಪಾಣೆಮಂಗಳೂರು, ಮೆಲ್ಕಾರ್ ಸಂಚಾರ ಠಾಣೆಯ ಎದುರು, ಬೋಳಂಗಡಿ, ನರಹರಿ ನಗರ, ದಾಸಕೋಡಿ, ಬಾಳ್ತಿಲ ತಿರುವುಗಳಲ್ಲಿ ಕೃತಕ ನೆರೆ ನೀರು ಸಂಗ್ರಹ ಗೊಳ್ಳುತ್ತದೆ. ಮಳೆ ಬಂದಾಗ ಸಂಚಾರಕ್ಕೆ ಅಡಚಣೆಯಾಗಿ ಮೈಲುದ್ದದ ಸಾಲು ಅನಿವಾರ್ಯವಾಗುತ್ತದೆ.ಆದ್ದರಿಂದ ಈಗಲೇ ಈ ಬಗ್ಗೆ ಕ್ರಮವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)