varthabharthi

ಗಲ್ಫ್ ಸುದ್ದಿ

ಅಲ್ ಕೋಬರ್ : 2018 ಕ್ಯಾಲೆಂಡರ್ ಬಿಡುಗಡೆ, ಉದಯೋನ್ಮುಖ ಕವಿಗಳ ಸಮಾಗಮ

ವಾರ್ತಾ ಭಾರತಿ : 27 Dec, 2017

ಸೌದಿ ಅರೇಬಿಯಾ, ಡಿ. 27: ಪ್ರಸ್ತುತ ಪಾಕ್ಷಿಕ ಓದುಗರ ವೇದಿಕೆ ಸೌದಿ ಅರೇಬಿಯಾ ಪಶ್ಚಿಮ ವಲಯ ಇದರ ವತಿಯಿಂದ ಪ್ರಸ್ತುತ ಕ್ಯಾಲೆಂಡರ್ 2018 ಬಿಡುಗಡೆ ಮತ್ತು ಉದಯೋನ್ಮುಖ ಕವಿಗಳ ಸಮಾಗಮ ಕಾರ್ಯಕ್ರಮ ಅಲ್ ಕೋಬರ್ ನ ರಫಾ ಮೆಡಿಕಲ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು. 

ಪ್ರಸ್ತುತ ಓದುಗರ ವೇದಿಕೆ ಅಧ್ಯಕ್ಷ ಇರ್ಷಾದ್ ಜೋಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಂಡಿಯಾ ಫ್ರೆಟರ್ನಿಟಿ ಫೋರಮ್ ದಮ್ಮಾಮ್ ಇದರ ಅಧ್ಯಕ್ಷ ಅತಾವುಲ್ಲಾ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಇಂಡಿಯಾ ಸೋಶಿಯಲ್ ಫೋರಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಪುತ್ತೂರು ಉಪಸ್ಥಿತರಿದ್ದರು. ಅಬ್ದುಲ್ ರಹಿಮಾನ್ ಕುತ್ತೆತ್ತೂರವರು ಸಭೆಯನ್ನುದ್ದೇಶಿಸಿ ಓದು ಮತ್ತು ಬರೆಯುದರ ಬಗ್ಗೆ ಪ್ರಜ್ಞೆಯನ್ನು ಮೂಡಿಸುದರೊಂದಿಗೆ ಬ್ಯಾರಿ ಭಾಷೆಗಿರುವ ಮಹತ್ವ ಮತ್ತು ಅದರ ಸಂಸ್ಕೃತಿಯ ಬಗ್ಗೆ ವಿವರವನ್ನು ನೀಡಿದರು.

ಪ್ರಸ್ತುತ ಕ್ಯಾಲೆಂಡರ್ 2018 ನ್ನು ಅಬ್ದುಲ್ ರಹಿಮಾನ್ ಕುತ್ತೆತ್ತೂರು ಅವರು ಕ್ಯಾಲೆಂಡರ್ ನ‌ ಪ್ರಾಯೋಜಕರಾದ ಎಸ್ ಎಸ್ ಕ್ಯೂ ಕಂಪೆನಿಯ ಪ್ರತಿನಿಧಿ ಇಬ್ರಾಹಿಂ, ಕೋಸ್ಟಲ್ ಇಂಟರ್ನಾಷನಲ್ ಮೆಷಿನರಿಯ ಮಾಲಕರಾದ ಶರೀಪ್ ಜೋಕಟ್ಟೆ, ಮಾಜಿದ್ ಅಲ್ ರಹ್ಮಾ ಕಂಪನಿಯ ಮಾಲಕರಾದ ಅಬ್ದುಲ್ ಸಮದ್, ಅಲ್ ಮುಸಾದ್ ಕಂಪನಿಯ ಮಾಲಕರಾದ ಶರೀಪ್ ಅಡ್ಡೂರು, ಟಿ ಎಮ್ ಟಿ ಮಾಲಕರಾದ ಆರೀಪ್ ಜೋಕಟ್ಟೆ ರವರಿಗೆ ಕ್ಯಾಲೆಂಡರ್ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಅಲ್ ಮಿರ್ಝಾ ಹಾಗೂ ಫತೇ ಅಲ್ ಜುನೂಬ್ ಕೂಡ ಈ ವರ್ಷದ ಪ್ರಸ್ತುತ ಕ್ಯಾಲೆಂಡರ್ 2018ಗೆ ಪ್ರಯೋಜಕತ್ವವನ್ನು ನೀಡಿತ್ತು.

ಈ ಸಂದರ್ಭದಲ್ಲಿ ಪ್ರಸ್ತುತ ಓದುಗರ ವೇದಿಕೆ ವಾರ್ಷಿಕವಾಗಿ ಕೊಡಮಾಡುವ ಪ್ರಸ್ತುತ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಬ್ಯಾರಿ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ  ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಜನಾಬ್ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಅವರಿಗೆ ನೀಡಿ ಸನ್ಮಾನಿಸಲಾಯಿತು.

ನಂತರ ನಡೆದ ಉದಯೋನ್ಮುಖ ಕವಿಗಳ ಸಮಾಗಮ ಕಾರ್ಯಕ್ರಮದ ಕವಿಗೋಷ್ಠಿಯನ್ನು  ಎ ಎಂ ಆರಿಫ್ ಜೋಕಟ್ಟೆ ಇವರ ಅದ್ಯಕ್ಷತೆಯಲ್ಲಿ, ಅಬ್ದುಲ್ ಖಾದರ್ ಮರವೂರು, ಶಾಹುಲ್ ಹಮೀದ್ ಕಾಶಿಪಟ್ನ, ಆಶಿಕ್ ಮಚಾರ್, ನಿಶಾಫ್ ಅಹಮದ್ ಕವನ ವಾಚನ ನಡೆಸಿದರು, ಹಿರಿಯ ಕವಿ ಅಬ್ದುಲ್ ರಹಿಮಾನ್ ಕುತ್ತೆತ್ತೂರವರು ತಮ್ಮ ಕವನದ ಮೂಲಕ ಸಭೆಯನ್ನು ಮನರಂಜಿಸಿದರು. ಕವನ ವಾಚಿಸಿದ ಕವಿಗಳಿಗೆ ಪ್ರಸ್ತುತ ಓದುಗರ ವೇದಿಕೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. 

ಸುನೈಫ್ ಕಾರ್ಯಕ್ರಮ ನಿರೂಪಿಸಿದರು, ಇರ್ಷಾದ್ ಜೋಕಟ್ಟೆ ಸ್ವಾಗತಿಸಿ ಪ್ರಸ್ತಾವಿಸಿದರು, ಇರ್ಷಾದ್ ಮಡಂತ್ಯಾರ್ ವಂದಿಸಿದರು.

 

Comments (Click here to Expand)