varthabharthi

ಗಲ್ಫ್ ಸುದ್ದಿ

ಕೆಸಿಎಫ್ ಬವಾದಿ ಸೆಕ್ಟರ್ ಅಧೀನದಲ್ಲಿ ಯಶಸ್ವಿ ಜಶ್'ನೆ ಮುಬಾರಕ್ ಕಾರ್ಯಕ್ರಮ

ವಾರ್ತಾ ಭಾರತಿ : 31 Dec, 2017

ಜಿದ್ದಾ, ಡಿ. 31: ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬವಾದಿ ಸೆಕ್ಟರ್ ಅಧೀನದಲ್ಲಿ ಕಳೆದ 41 ದಿನಗಳ ಕಾಲ ನಡೆಸಿಕೊಂಡು ಬರುತ್ತಿದ ಸಹಿಷ್ಣುತೆಯ ಪ್ರವಾದಿ (ಸ.ಅ) ಕಾರ್ಯಕ್ರಮದ ಸಮಾರೋಪ ಸಮಾರಂಭವು ಹಂದಾನಿಯ್ಯಾದಲ್ಲಿ ಸೆಕ್ಟರ್ ಅಧ್ಯಕ್ಷ ಸುಲೈಮಾನ್ ಬಂಡಾಡ್  ಅಧ್ಯಕ್ಷತೆಯಲ್ಲಿ ನಡೆಯಿತು.

ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷ ಸಯ್ಯದ್ ಅಬೂಬಕರ್ ತಂಙಳ್  ದುಆದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಹನೀಫ್ ಸಖಾಫಿ ಸಾಲೆತ್ತೂರು  ಉದ್ಘಾಟಿಸಿದರು. 'ನಮ್ಮ ಜೀವನದಲ್ಲಿ ಕೆಸಿಎಫ್' ಎಂಬ ವಿಷಯವಾಗಿ ಮಾತನಾಡಿದ ಉಸ್ತಾದರು ಕೆಸಿಎಫ್ ನಮ್ಮ‌ ಜೀವದಲ್ಲಿ ಯಾಕೆ ಬೇಕು ಎಂಬುದನ್ನು ವಿವರಿಸಿದರು. ನಂತರ 'ಪ್ರವಾಸಿಯ ಕುಟುಂಬ' ಎಂಬ ವಿಷಯವಾಗಿ ಝೈನುದ್ದೀನ್ ಮುಸ್ಲಿಯಾರ್ ಬೆಳ್ಳಾರೆ ಮಾತನಾಡಿದರು.

ಐಸಿಎಫ್ ಮಕ್ರೋಣ ಸರ್ಕಲ್ ಅಧ್ಯಕ್ಷ ಮಹ್'ಸಿನ್ ಸಖಾಫಿ ಅನುಸ್ಮರಣ ಭಾಷಣವನ್ನು ಮಾಡಿದರು.  ಕಾರ್ಯಕ್ರಮದಲ್ಲಿ ಜೀಲಾನಿ, ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾರನ್ನು ಅನುಸ್ಮರಿಸಲಾಯಿತು. ಆರ್ ಎಸ್ ಸಿ ಜಿದ್ದಾ ಸರ್ಕಲ್ ಜನರಲ್ ಕನ್ವೀನರ್  ನಾಸಿಫ್ ಕಲ್ಲಿಕೋಟೆ ‍‍‍‍‍‍‍‍‍ಮಾತನಾಡಿದರು.

ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರಿಗೆ 'ಆಶಿಖುರ್ರಸೂಲ್ ಇಮಾಂ ಅಹ್ಮದ್ ರಝಾ ಖಾನ್ ಅಲ್-ಫಾಳಿಲಿ ಬರೇಲ್ವಿ' ಅವಾರ್ಡ್ ನೀಡಿ ಗೌರವಿಸಲಾಯಿತು. ಊರಿಗೆ ತೆರಳುತ್ತಿರುವ ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷ ಸಯ್ಯದ್ ಅಬೂಬಕಕರ್ ತಂಙಳ್ ಹಾಗೂ ಕೋಶಾಧಿಕಾರಿ ಸಯ್ಯದ್ ಖಾಲಿದ್ ತಂಙಳ್ ರಿಗೆ ಬೀಳ್ಕೊಡುಗೆ ಮಾಡಲಾಯಿತು.

ಜಿ ಎಂ ಸುಲೈಮಾನ್ ಹನೀಫಿ, ಸಯ್ಯದ್ ಖಾಲಿದ್ ತಂಙಳ್ ಹಾಗೂ ಅಝೀಝ್ ಝುಹ್ರಿ ಬಾಳೆಪುನಿ ಉಸ್ತಾದರ ನೇತ್ರತ್ವದಲ್ಲಿ ನಡೆದ ಆತ್ಮೀಯ ಮಜ್ಲಿಸ್ ನಂತರ ಮುಹಮ್ಮದ್ ಬಿನ್ ರಝಾಕ್ ಹಾಜಿ ಪಾಣೆಮಂಗಳೂರು ಆಶಿಖುರ್ರಸೂಲ್ ಇಮಾಂ ಅಹ್ಮದ್ ರಝಾ ಖಾನ್ ಅಲ್-ಫಾಳಿಲಿ ಬರೇಲ್ವಿ ಅವರ ಮದ್'ಹ್ ಹೇಳಿದರು. 

ಕ್ವಿಝ್, ಮೆಮೊರಿ ಟೆಸ್ಟ್, ಮಕ್ಕಳ ಸ್ಪರ್ದೆ ಹಾಗೂ ಮಹಿಳೆಯರಿಗಾಗಿ ಮಹಿಳೆಯರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳೂ ನಡೆಸಿ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.

ಸಯ್ಯದ್ ಝಕರಿಯಾ ತಂಙಳ್, ಸಯ್ಯದ್ ಮುಹಮ್ಮದ್ ಬುಖಾರಿ ತಂಙಳ್ ಉಚ್ಚಿಲ, ಕೆಸಿಎಫ್ ಜಿದ್ದಾ ಝೋನ್ ಕಾರ್ಯದರ್ಶಿ ಇಬ್ರಾಹಿಂ ಕಿನ್ಯಾ, ಝೋನ್ ಅಧೀನದಲ್ಲಿರುವ ಸೆಕ್ಟರ್ ಗಳ ನೇತಾರರು ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ ಈ ಕಾರ್ಯಕ್ರಮಕ್ಕೆ ಇಂಜಿನಿಯರ್ ಮುಹಮ್ಮದ್ ಕಲ್ಲರ್ಬೆ ಯವರು ಸ್ವಾಗತಿಸಿ ಅಬ್ದುಲ್ ಸಲಾಂ ಎಣ್ಮೂರು ವಂದಿಸಿದರು ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಚೇರ್ಮಾನ್ ಸಯ್ಯದ್ ಖಾಲಿದ್ ರಿಪ್ಪನಪೇಟೆ  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

 

Comments (Click here to Expand)