varthabharthi

ನಿಧನ

ಎನ್.ನಾಗೇಂದ್ರಸ್ವಾಮಿ

ವಾರ್ತಾ ಭಾರತಿ : 1 Jan, 2018

ಕೊಳ್ಳೇಗಾಲ. ಜ. 01: ಕನ್ನಡಪ್ರಭ ಪತ್ರಿಕೆ ವರದಿಗಾರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ನಾಗೇಂದ್ರಸ್ವಾಮಿ ಅವರ ತಂದೆ ನಂಜುಂಡಸ್ವಾಮಿ(ತಂಬಡಪ್ಪ) 75 ವರ್ಷ ಸೋಮವಾರ ನಿಧನರಾದರು.

ಮೃತ ನಂಜುಂಡಸ್ವಾಮಿ ಅವರು ಮೂವರು ಗಂಡು ಮಕ್ಕಳು, ಪತ್ನಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಪಟ್ಟಣದ ಬಸ್ತೀಪುರ ರಸ್ತೆಯಲ್ಲಿರುವ ನಾಗೇಂದ್ರಸ್ವಾಮಿ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಸ್ವಾಭಾವಿಕ ಮರಣ ಹೊಂದಿದ್ದು, ಚಾನಗರ ತಾಲೂಕು ಬೆಲವತ್ತ ಗ್ರಾಮದಲ್ಲಿ ಅಂತ್ಯಕ್ರಿಯೆ ನೇರೆವೇರಿತು.

ಸಂತಾಪ: ಹನೂರು ಶಾಸಕ ಆರ್.ನರೇಂದ್ರ, ಮಾಜಿ ಶಾಸಕಿ ಪರಿಮಳಾನಾಗಪ್ಪ, ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್, ಬಿಜೆಪಿ ಮುಖಂಡರಾದ ಸರ್ವೇಶ್‍ಬಸವಯ್ಯ, ದತ್ತೇಶ್, ನಗರಸಭೆ ಅಧ್ಯಕ್ಷ ಬಸ್ತೀಪುರ ಶಾಂತರಾಜು, ಸದಸ್ಯರಾದ ಪರಮೇಶ್ವರಯ್ಯ, ಸುಮಾಸುಬ್ಬಣ್ಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಂದೀಶ್, ಉಪಾಧ್ಯಕ್ಷ ಕೋಟಂಬಳ್ಳಿ ಗುರುಸ್ವಾಮಿ, ಕಾರ್ಯದರ್ಶಿ ದೇವರಾಜು ಕಪ್ಪಸೋಗೆ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಧ್ಯಕ್ಷ ನಿಂಪು ರಾಜೇಶ್, ಪ್ರಧಾನ ಕಾರ್ಯದರ್ಶಿ ಬಸಂತ್‍ಮೋಟಾಯ್, ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಅಣಗಳ್ಳಿ ಬಸವರಾಜು, ನಾಗರೀಕ ಹಿತರಕ್ಷಣಾ ಸಮಿತಿಯ ನಟರಾಜುಮಾಳಿಗೆ, ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಬೂದಿತಿಟ್ಟು ಗುರುಸ್ವಾಮಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಸಂಸದ ಆರ್.ಧೃವನಾರಾಯಣ್, ಶಾಸಕ ಎಸ್.ಜಯಣ್ಣ, ಮಾಜಿ ಶಾಸಕ ಬಾಲರಾಜು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)