varthabharthi

ಸಿನಿಮಾ

ಕುತೂಹಲಕ್ಕೆ ತೆರೆ

ಶಾರುಖ್ ಖಾನ್ ಕುಳ್ಳನಾಗಿರುವ ಹೊಸ ಚಿತ್ರದ ಹೆಸರು, ಟೀಸರ್ ಬಿಡುಗಡೆ

ವಾರ್ತಾ ಭಾರತಿ : 1 Jan, 2018

ಮುಂಬೈ, ಜ.1: ಬಾಲಿವುಡ್ ನಟ ಶಾರೂಖ್ ಖಾನ್ ಅಭಿನಯದ ಹೊಸ ಚಲನಚಿತ್ರದ ಟೀಸರ್ ಜನವರಿ 1ರಂದು ಬಿಡುಗಡೆಯಾಗಿದೆ. ಟ್ವಿಟರ್ ನಲ್ಲಿ ಶಾರೂಕ್ ಹೊಸ ಚಿತ್ರದ ಟೀಸರನ್ನು ಬಿಡುಗಡೆಗೊಳಿಸಿದ್ದಾರೆ. ಇದರೊಂದಿಗೆ ಇಷ್ಟು ದಿನಗಳ ಕಾಲ ಸಸ್ಪೆನ್ಸ್ ನಂತಿದ್ದ ಶಾರೂಖ್ ಸಿನೆಮಾದ ಹೆಸರು ಕೂಡ ಬಹಿರಂಗವಾಗಿದೆ.

ಆನಂದ್ ಎಲ್ ರೈ ನಿರ್ದೇಶನದ ಈ ಸಿನೆಮಾಗೆ ‘ಝೀರೋ’ ಎಂದು ಹೆಸರಿಡಲಾಗಿದ್ದು, ಚಿತ್ರದಲ್ಲಿ ಶಾರೂಖ್ ಕುಳ್ಳನಾಗಿ ಅಭಿನಯಿಸಿದ್ದಾರೆ. ಸಂಪೂರ್ಣ ಕಾಮಿಡಿ ಚಿತ್ರ ಎಂದು ಹೇಳಲಾಗಿದೆ.

‘ತನು ವೆಡ್ಸ್ ಮನು’, ‘ತನು ವೆಡ್ಸ್ ಮನು ರಿಟರ್ನ್ಸ್’ ಹಾಗು ರಾಂಝನಾದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಆನಂದ್ ರೈ ಮೊದಲ ಬಾರಿಗೆ ಶಾರೂಖ್ ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅನುಷ್ಕಾ ಶರ್ಮಾ ಹಾಗು ಕತ್ರಿನಾ ಕೈಫ್ ಕೂಡ ನಟಿಸಿದ್ದಾರೆ ಎನ್ನಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)