varthabharthi

ನಿಮ್ಮ ಅಂಕಣ

ನಲ್ಲಿ ನೀರು ಸರಬರಾಜು ಮಾಡಿ

ವಾರ್ತಾ ಭಾರತಿ : 2 Jan, 2018
-ಮಧುಕುಮಾರ್ ಬಿಳಿಚೋಡು, ದಾವಣಗೆರೆ

ಮಾನ್ಯರೇ,

ಕಳೆದ ಬಾರಿ ರಾಜ್ಯದ ನಾನಾಕಡೆ ಮಳೆಯಿಲ್ಲದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತ್ತು. ಹಾಗಾಗಿ ಟಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿಯ ಹಿಂಗಾರು ಮಳೆಯಿಂದಾಗಿ ಕೆರೆಕಟ್ಟೆ ತುಂಬಿವೆ. ಹೀಗಿದ್ದರೂ ದಾವಣಗೆರೆ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಮೊದಲಿನಂತೆ ನಲ್ಲಿಗಳಲ್ಲಿ ನೀರುಬಾರದೆ ಟ್ಯಾಂಕರ್‌ಗಳ ಮುಖಾಂತರವೇ ನೀರು ಸರಬರಾಜು ಮಾಡಲಾಗುತ್ತಿವೆ. ಯಾವ್ಯಾವುದೋ ನೆಪಗಳನ್ನು ಹೇಳುವ ಮುಖಾಂತರ ನಲ್ಲಿ ನೀರು ಸರಬರಾಜನ್ನು ಮುಂದಕ್ಕೆ ತಳ್ಳ್ಳುತ್ತಿವೆ. ಅಲ್ಲಿನ ಗ್ರಾಮಪಂಚಾಯತ್‌ಗಳು ಟ್ಯಾಂಕರ್‌ಗಳಲ್ಲಿ ಒದಗಿಸುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಹಾಗಾಗಿ ಕುಡಿಯುವ ನೀರಿಗಾಗಿ ಜನತೆ ದೂರ ದೂರ ಅಲೆಯುವ ಪರಿಸ್ಥಿತಿ ಇದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಅರಿತು ಶುದ್ಧ ನಲ್ಲಿನೀರಿನ ಸರಬರಾಜು ಆರಂಭಿಸಬೇಕಾಗಿದೆ.
 

 

Comments (Click here to Expand)