varthabharthi

ಗಲ್ಫ್ ಸುದ್ದಿ

ಕೆಸಿಎಫ್ ಬಹರೈನ್ ಸಮಾಗಮ ಏಕದಿನ ತರಬೇತಿ ಶಿಬಿರ

ವಾರ್ತಾ ಭಾರತಿ : 3 Jan, 2018

ಬಹರೈನ್, ಜ. 3: ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಬಹರೈನ್  ಆಯೋಜಿಸಿದ ಸಮಾಗಮ ಏಕದಿನ ತರಬೇತಿ ಶಿಬಿರವು ಇತ್ತೀಚೆಗೆ  ಐಸಿಎಫ್ ಸುನ್ನಿ ಸೆಂಟರ್ ಮನಾಮದಲ್ಲಿ ನಡೆಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಎಸ್ ಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶಕ್ಕೆ ಮುಖ್ಯ  ತರಬೇತುದಾರರಾಗಿ ಕೆ.ಸಿ.ಎಫ್ ಅಂತರ್ ರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷ ಪಿ.ಎಂ.ಎಚ್ ಈಶ್ವರಮಂಗಳ ಆಗಮಿಸಿದ್ದರು.

ಕೆ.ಸಿ.ಎಫ್ ಮುಹರ್ರಕ್ ಸೆಕ್ಟರ್ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಉಸ್ತಾದ್ ಅವರ ದುಃಅ ದೊಂದಿಗೆ ಶಿಬಿರವು ಆರಂಭಗೊಂಡಿತು.

ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಸಮದ್ ಉಜಿರೆಬೆಟ್ಟು ಸ್ವಾಗತ ಭಾಷಣವನ್ನು ಮಾಡಿದರು. ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಐ ಸಿ ಎಫ್ ಮನಾಮ ಸೆಂಟ್ರಲ್ ಇದರ ಅಧ್ಯಕ್ಷ ಶಾನವಾಝ್  ಮದನಿ ಅವರು ಶೈಖ್ ಜೀಲಾನಿ (ಖ. ಸಿ.)ರವರ ಜೀವನ ಚರಿತ್ರೆ ಯನ್ನು ವಿವರಿಸುತ್ತಾ, ತಮ್ಮ ಜೀವನವನ್ನೇ ದೀನೀ ಪ್ರಚಾರಕ್ಕಾಗಿ ಮುಡಿಪಾಗಿಟ್ಟ ಉಲಮಾ ಉಮರಾ ಮಹಾನುಭಾವರ ನಿಸ್ವಾರ್ಥ ಸೇವೆಯ ವ್ಯಕ್ತಿತ್ವ ಗಳನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ಜೀವನವನ್ನು ಮುನ್ನಡೆಸುವಂತೆ ಕೆ ಸಿ ಎಫ್ ಕಾರ್ಯಕರ್ತರಿಗೆ ಕರೆ ನೀಡಿದರು. 

ಪ್ರಾಸ್ತಾವಿಕ ಭಾಷಣವನ್ನು ಕೆಸಿಎಫ್ ಬಹರೈನ್ ಐಎನ್ಸಿ ಪ್ರತಿನಿಧಿ ಜಮಾಲ್ ವಿಠ್ಠಲ ಅವರು ನೆರವೇರಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಫಾರೂಕ್ ಎಸ್ ಎಂ ರವರು ಮಾತನಾಡುತ್ತಾ,  ಸಂಘಟನಾ ತರಬೇತಿ ಶಿಬಿರದ ಅವಶ್ಯಕತೆಯ ಕುರಿತು ಸಂಕ್ಷಿಪ್ತ ವಾಗಿ ವಿವರಿಸಿದರು. ಕೆ ಸಿ ಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಅಝೀಝ್ ಸುಳ್ಯ ರವರು ಕೆ ಸಿ ಎಫ್ ಕಾರ್ಯಕಾರಿ ಸಮಿತಿ ಸದಸ್ಯರನ್ನು ಪರಿಚಯಿಸಿದರು. 

ಸಂಘಟನಾ ತರಬೇತಿ ಕಾರ್ಯಕ್ರಮದಲ್ಲಿ ಪಿ.ಎಂ.ಎಚ್ ಅಬ್ದುಲ್ ಹಮೀದ್ ಈಶ್ವರಮಂಗಲ ರವರು ಸಂಘಟನೆಯ ಎಲ್ಲಾ ಇಲಾಖೆಗಳ ಮಾರ್ಗಸೂಚಿ ಗಳನ್ನು  ವಿವರಿಸಿದರು. ಆರ್ ಎಸ್ ಸಿ ಬಹರೈನ್ ನ್ಯಾಷನಲ್ ಚೇರ್ಮ್ಯಾನ್ ಅಬ್ದುಲ್ ರಹೀಮ್ ಸಖಾಫಿ ಉಸ್ತಾದ್  ತರಬೇತಿ ನೀಡಿದರು. 

ತರಬೇತಿ ಕಾರ್ಯಕ್ರಮದಲ್ಲಿ ಐಸಿಎಫ್ ಬಹರೈನ್ ಇದರ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಸಿ  ಕರೀಂ ರವರು ಪರಿಣಾಮಕಾರಿ ಸಭೆ ನಡೆಯಬೇಕಾದರೆ ಅವಶ್ಯ ಕತೆ ಇರುವ  ಕೆಲವು ಮಹತ್ವಪೂರ್ಣ ಟಿಪ್ಸ್ ಗಳನ್ನು ಕೆಸಿಎಫ್ ಕಾರ್ಯಕರ್ತರಿಗೆ ತಿಳಿಸಿದರು.

ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಎಕ್ಸಿಕ್ಯೂಟಿವ್, ಅಸ್ಸುಫ್ಫಾ ಬೋಧಕರೂ ಆಗಿರುವ  ಅಬೂಬಕರ್ ಮದನಿ ಉಸ್ತಾದ್ ರವರು  ಸಂಘಟನೆಯ ಎಲ್ಲಾ ಖಾತೆಗಳ ನೇತಾರರೊಂದಿಗೆ, ತಮ್ಮ ತಮ್ಮ ಜವಾಬ್ದಾರಿ ಗಳ ಮಹತ್ವವನ್ನು ಅರಿತು ಕಾರ್ಯಾಚರಿಸಲು, ಸ್ವಹಾಭಿ ವರ್ಯ ರುಗಳ ನೇತೃತ್ವವನ್ನು  ಮಾದರಿಯಾಗಿಸಿ ಕಾರ್ಯಪ್ರವೃತ ರಾಗಬೇಕೆಂದು ತಿಳಿಸಿದರು. ಶಿಬಿರದ ಕೊನೆಯಲ್ಲಿ ತರಬೇತಿ ಕಾರ್ಯಕ್ರಮದ ಅನುಭವವವನ್ನು ಸದಸ್ಯರು ಪರಸ್ಪರ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕೆಸಿಎಫ್ ಬಹರೈನ್ ಐಎನ್ ಸಿ ನೇತಾರಾದ ಅಲಿ ಮುಸ್ಲಿಯಾರ್, ಜಮಾಲುದ್ದೀನ್ ವಿಟ್ಟಲ್, ಫಕ್ರುದ್ದೀನ್ ಹಾಜಿ , ಕೆಸಿಎಫ್ ಬಹರೈನ್ ರಾಷ್ಟ್ರೀಯ, ಝೋನ್, ಸೆಕ್ಟರ್ ಗಳ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.

ಕಾರ್ಯಕ್ರಮ ನಿರೂಪಣೆಯನ್ನು ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ನಿರ್ವಹಿಸಿ, ಬಹರೈನ್ ರಾಷ್ಟ್ರೀಯ ಸಮಿತಿ ಎಜುಕೇಶನ್ ವಿಭಾಗದ ಚೇರ್ಮ್ಯಾನ್ ಖಲಂದರ್  ಶರೀಫ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)