varthabharthi

ನಿಮ್ಮ ಅಂಕಣ

‘ಆಪರೇಷನ್ ಸೇಫ್ ರೈಡ್’ ಎಲ್ಲೆಡೆ ನಡೆಯಲಿ

ವಾರ್ತಾ ಭಾರತಿ : 4 Jan, 2018
-ಮಧುಕುಮಾರ್ ಬಿಳಿಚೋಡು, ದಾವಣಗೆರೆ

ಮಾನ್ಯರೇ

ಮೈಸೂರಿನ ವಿವಿಧ ನಗರಗಳಲ್ಲಿ ಪೊಲೀಸ್ ಅಧಿಕಾರಿಗಳು ‘ಆಪರೇಷನ್ ಸೇಫ್ ರೈಡ್’ನ ಮುಖಾಂತರ ಅರೆ ಹೆಲ್ಮೆಟ್‌ಗಳನ್ನು ವಶಪಡಿಸಿಕೊಂಡು ದ್ವಿಚಕ್ರ ಸವಾರರಿಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಅರೆ ಹೆಲ್ಮೆಟ್ ಧರಿಸಿ ವಾಹನ ಚಲಿಸುವಂತಹ ವ್ಯಕ್ತಿಗಳಿಗೆ ಆ ಹೆಲ್ಮೆಟ್ ತಮ್ಮ ಜೀವಕ್ಕೆ ಎಷ್ಟರಮಟ್ಟಿಗೆ ರಕ್ಷಣೆ ನೀಡಲಿದೆ ಎಂಬುದರ ಬಗ್ಗೆ ಗೊತ್ತಿದ್ದರೂ ಯಾವುದೋ ಕಾಟಾಚಾರಕ್ಕೆ ಇಂತಹ ಹೆಲ್ಮೆಟ್‌ಗಳನ್ನು ಧರಿಸಿ ವಾಹನ ಚಾಲನೆ ಮಾಡುತ್ತಿದ್ದಾರೆ. ಇಂತಹ ಸುರಕ್ಷತೆಯಿಲ್ಲದ ಹೆಲ್ಮೆಟ್ ಧರಿಸಿ ಸವಾರಿ ಮಾಡುವಂತಹವರಿಗೆ ರಾಜ್ಯದೆಲ್ಲೆಡೆ ಕಡಿವಾಣ ಹಾಕಬೇಕಿದೆ.

ಭಾರತದಲ್ಲಿ ನಡೆದ ಸಂಶೋಧನೆ ಪ್ರಕಾರ ಅತೀಹೆಚ್ಚು ಅಪಘಾತ ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ದಿಲ್ಲಿ, ತಮಿಳುನಾಡು ಆನಂತರದ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ. ದೇಶದಲ್ಲಿ ಪ್ರತೀ ಮೂರು ನಿಮಿಷಕೊಮ್ಮೆ ಒಬ್ಬ ವ್ಯಕ್ತಿಯು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದಾನೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಹೊರಹಾಕಿವೆ. ಅದರಲ್ಲಿ ಶೇ.34ರಷ್ಟು ದ್ವಿಚಕ್ರ ವಾಹನಗಳೇ ಎಂಬುದನ್ನು ಈ ಮಾಹಿತಿ ಸಾಬೀತು ಪಡಿಸಿದೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ‘ಆಪರೇಷನ್ ಸೇಫ್ ರೈಡ್’ ನಡೆಯಬೇಕಿದೆ. ಗುಣಮಟ್ಟದ ಅಂದರೆ ಬಿಐಎಸ್ ಅಥವಾ ಐಎಸ್‌ಐ ಆಧಾರಿತ ಹೆಲ್ಮೆಟ್‌ಗಳನ್ನು ಧರಿಸಿ ವಾಹನ ಚಲಾಯಿಸಲು ಜಾಗೃತಿ ಮೂಡಿಸಬೇಕಿದೆ.

 

Comments (Click here to Expand)