varthabharthi

ನಿಮ್ಮ ಅಂಕಣ

ಒಂದೇ ರೀತಿ ಇರಲಿ

ವಾರ್ತಾ ಭಾರತಿ : 5 Jan, 2018
Varthabharathi

ಮಾನ್ಯರೇ,

ರಾಜ್ಯದ ಹೆಚ್ಚಿನ ಶಿಕ್ಷಕರು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿಯೇ ಕೆಲಸ ಮಾಡಲು ಬಯಸುತ್ತಾರೆ. ಹಳ್ಳಿಗಳ ಕಡೆ ವರ್ಗಾವಣೆ ಮಾಡಿಸಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಹಳ್ಳಿಗಳಿಗೆ ವರ್ಗಾಯಿಸಿದರೂ ಏನಾದರೂ ಮಾಡಿ ವರ್ಗಾವಣೆ ಮುಂದೆ ಹಾಕುತ್ತಾರೆ. ರಾಜ್ಯ ಸರಕಾರ ಮನೆ ಬಾಡಿಗೆ ಭತ್ತೆ, ಇತ್ಯಾದಿ ಸವಲತ್ತುಗಳನ್ನು ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಈ ವಿಷಯದಲ್ಲಿ ‘ಎ’ ವಲಯ ಹಾಗೂ ‘ಸಿ’ ವಲಯದ ಶಿಕ್ಷಕರಿಗೂ ಒಂದೇ ನ್ಯಾಯ ಇರಲಿ, ಯಾವ ಕಡೆ ಹೆಚ್ಚು ಸೌಲಭ್ಯ ಸಿಗುತ್ತದೆಯೋ ಆ ಕಡೆ ಮನಸ್ಸು ವಾಲುವುದು ಸಾಮಾನ್ಯಲ್ಲವೇ?

-ನಿರ್ಮಲ, ಟಿ. ಲಕ್ಕಿಹಳ್ಳಿ, ಹೊಸದುರ್ಗ

 

Comments (Click here to Expand)