varthabharthi

ನಿಮ್ಮ ಅಂಕಣ

ಗಣತಿ ಜೊತೆಗೆ ಸಾವಿನ ತನಿಖೆಯಾಗಲಿ

ವಾರ್ತಾ ಭಾರತಿ : 5 Jan, 2018

 ಮಾನ್ಯರೇ,

ಕರ್ನಾಟಕ, ಅತೀ ಹೆಚ್ಚು ಹುಲಿಗಳಿರುವ ರಾಜ್ಯ. 4 ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿ ಇದೀಗ ನಮ್ಮ ರಾಜ್ಯದಲ್ಲಿ ಆರಂಭವಾಗಿದೆ. ಅಭಯಾರಣ್ಯಗಳ ಜೊತೆ ರಕ್ಷಿತಾರಣ್ಯಗಳಲ್ಲೂ ಈ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಇಕಲಾಜಿಕಲ್ ಆ್ಯಪ್‌ನ್ನು ಬಳಸಲಾಗುತ್ತಿದೆ. ಇದು ಸ್ವಾಗತಾರ್ಹವೇ. ಆದರೆ ಇನ್ನೊಂದೆಡೆ ಹುಲಿಗಳ ಸಾವು ಪ್ರಕರಣದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಇದು ಆತಂಕಕಾರಿ ವಿಷಯ. ರಾಷ್ಟ್ರೀಯ ಪ್ರಾಣಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಕಳೆದ ವರ್ಷ ರಾಜ್ಯದಲ್ಲಿ 15 ಹುಲಿಗಳು ಸಾವನ್ನಪ್ಪಿದ್ದವು. ಯಾಕೆ ಹುಲಿಗಳು ಸಾವನ್ನಪ್ಪುತ್ತಿವೆ ಎಂಬುದು ತಿಳಿಯುತ್ತಿಲ್ಲ. ಹುಲಿ ಸಂರಕ್ಷಣೆಗೆ ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಂಡರೂ ಅದು ಸಫಲತೆ ಕಂಡಿಲ್ಲ ಎನ್ನುವುದಕ್ಕೆ ಇದುವೇ ಉದಾಹರಣೆ. ರಾಷ್ಟ್ರೀಯ ಪ್ರಾಣಿಯನ್ನು ಉಳಿಸಬೇಕಾದುದು ಆದ್ಯ ಕರ್ತವ್ಯವಾಗಬೇಕು. ಕೂಡಲೇ ಹುಲಿ ಸಾವಿನ ನಿಖರ ಕಾರಣ ಪತ್ತೆ ಹಚ್ಚಿ, ಹುಲಿಗಳ ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.

-ಶಂಶೀರ್ ಬುಡೋಳಿ, ಬಂಟ್ವಾಳ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)