varthabharthi

ನಿಮ್ಮ ಅಂಕಣ

ವಿಷಾದದ ಸಾಲುಗಳು

ವಾರ್ತಾ ಭಾರತಿ : 7 Jan, 2018
-ಜಲೀಲ್ ಮುಕ್ರಿ
Varthabharathi


ಸಹಕರಿಸಿ

ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ..
ಮಾನವ ಹೆಣ ಖಂಡಿತಾ ಬೇಡ
ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ನರ
ಹೆಣ ಬೇಕಾಗಿದೆ...


ಅರಮನೆ ಕಟ್ಟಿಕೊಂಡಿದ್ದೇನೆ
ಮಕ್ಕಳು ಮರಿ
ಮಕ್ಕಳಿಗಾಗುವಷ್ಟು ಕೂಡಿಟ್ಟಿದ್ದೇನೆ
ಮಾನವ ಸಹಜ ಆಸೆ ನನ್ನಲ್ಲಿ ಇನ್ನೂ ಇದೆ
ಇನ್ನೂ ಕೂಡಿಡಬೇಕಾಗಿದೆ..
ಸಹಕರಿಸಿ ಹೆಣವೊಂದು ಬೇಕಾಗಿದೆ...

ಹಿಂದೂ ಮುಸ್ಲಿಮ್
ಅನ್ನು ಕೊಂದ
ಮುಸ್ಲಿಮ್ ಹಿಂದೂವನ್ನು ಕೊಂದ
ಹೆಣ ಬೇಕಾಗಿದೆ

ಸ್ವಧರ್ಮದವರೇ ಕೊಂದ ಅತ್ಯಾಚಾರ ಮಾಡಿದ ಹೆಣ ಖಂಡಿತಾ ಬೇಡ
ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ...

ಬಡವರಿಗೆ ಉಣ್ಣಿಸಲಿಲ್ಲ
ದರಿದ್ರರಿಗೆ ಸೂರಿಲ್ಲ
ಲಂಚ ಭ್ರಷ್ಟಾಚಾರ ನಿಲ್ಲಿಸಲಾಗಲಿಲ್ಲ
ಸುಳ್ಳು ಭರವಸೆ ಪೂರೈಸಲಿಲ್ಲ
ಮತಗಿಟ್ಟಿಸಲು ಬೇರೆ ದಾರಿಯಿಲ್ಲ
ಹೆಣವೊಂದು ಬೇಕಾಗಿದೆ...

ಪೂಜಾರಿ, ಬಾಳಿಗ, ಅಶ್ರಫ್, ದಾನಮ್ಮ,
ಶರತ್, ದೀಪಕ್‌ರ ಹೆಣದಲ್ಲಿ
ಒಂದಿಷ್ಟು ಮತ ಸಿಕ್ಕೀತು
ಆದರೂ ಗೆಲ್ಲಲು ಇನ್ನೊಂದಿಷ್ಟು
ಹೆಣಗಳು ಬೇಕಾಗಿದೆ....

ಪಕ್ಷ ಪಕ್ಷಗಳ
ಪೈಪೋಟಿಯ ಮಾರುಕಟ್ಟೆಯಲ್ಲಿ

ಹೆಣಗಳು ಹರಾಜಾಗುತ್ತಿವೆ ಬಿಕರಿಯಾಗುತ್ತಿದೆ ಕೊಂದವರು, ಸತ್ತವರು


ಸಾರಾಸಗಟು ಹರಾಜಾಗುತ್ತಿದ್ದಾರೆ ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ
ಮಾನವ ಹೆಣ ಖಂಡಿತಾ ಬೇಡ
ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್
ಹೆಣ ಬೇಕಾಗಿದೆ
ಸಹಕರಿಸಿ ಪ್ಲೀಸ್ ನಮ್ಮ ನಾಡ ಕಾಪಾಡಿ..

 

Comments (Click here to Expand)