varthabharthi

ಸಿನಿಮಾ

ಜನವರಿ 25ಕ್ಕೆ ‘ಪದ್ಮಾವತ್’ ಬಿಡುಗಡೆ

ವಾರ್ತಾ ಭಾರತಿ : 7 Jan, 2018
Varthabharathi

ಹೊಸದಿಲ್ಲಿ, ಜ.7: ಭಾರೀ ವಿವಾದ ಸೃಷ್ಟಿಸಿದ್ದ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಬಾಲಿವುಡ್ ಚಿತ್ರ ‘ಪದ್ಮಾವತ್’ ಜನವರಿ 25ರಂದು ಬಿಡುಗಡೆಯಾಗಲಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗು ಶಾಹಿದ್ ಕಪೂರ್ ಮುಖ್ಯಭೂಮಿಕೆಯ ‘ಪದ್ಮಾವತ್’ ಅಕ್ಷಯ್ ಕುಮಾರ್ ನಟನೆಯ ‘ಪ್ಯಾಡ್ ಮ್ಯಾನ್’ ಚಿತ್ರದೊಂದಿಗೆ ಬಿಡುಗಡೆಯಾಗಲಿದೆ.

“ಶುಕ್ರವಾರ ಸಿಬಿಎಫ್ ಸಿ ಪದ್ಮಾವತ್ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. 2 ಗಂಟೆ 43 ನಿಮಿಷಗಳ ಚಿತ್ರದ ಅವಧಿಗೆ ಒಪ್ಪಿಗೆ ಸೂಚಿಸಲಾಗಿದೆ” ಎಂದು ಮುಂಬೈ ಮಿರರ್ ವರದಿ ಮಾಡಿದೆ.

 

Comments (Click here to Expand)