varthabharthi

ಸುಗ್ಗಿ

ಕವನ

ಶಬ್ದಗಳು

ವಾರ್ತಾ ಭಾರತಿ : 7 Jan, 2018
ಬದ್ರುದ್ದೀನ್ ಕೂಳೂರು
Varthabharathi

1) ಶಬ್ದಗಳು

ಸ್ತಬ್ಧವಾಗುವುದು

ಮಾನಹರಣದ

ವೌನದೊಳಗೆ...!

2) ಶಬ್ದಗಳು

ಸದ್ದಾಗುವುದು

ಬಯಕೆಗಳ

ಕನಸಿನೊಳಗೆ...!

3) ಶಬ್ದಗಳು

ಉದ್ಭವವಾಗುವುದು

ಕಣ್ಣಂಚಿನಲಿಳಿದ

ಧಾರೆಯೊಳಗೆ...!

4) ಶಬ್ದಗಳು ಮುಗ್ಧವಾಗುವುದು

ಮಮತೆಯ ವಾತ್ಸಲ್ಯದೊಳಗೆ...!

5) ಶಬ್ದಗಳು

ಸಾಗರವಾಗಿಹುದು

ದಾಹ ತೀರಿಸದ ಉಪ್ಪಿನೊಳಗೆ...!

6) ಶಬ್ದಗಳು

ಮಗ್ನವಾಗಿಹುದು

ಒಣ ಪ್ರತಿಷ್ಠೆಯ ಮುಖವಾಡದೊಳಗೆ...!

7) ಶಬ್ದಗಳು

ಜ್ವಾಲಾಮುಖಿಯಾಗಿಹುದು

ದಣಿವು ತೀರದ ಬೆವರಿನೊಳಗೆ...!

8) ಶಬ್ದಗಳು

ಮುದ್ದಾಗಿಹುದು

ಮಗುಮೊಗದ ನಗುವಿನೊಳಗೆ

9) ಶಬ್ದಗಳು

ಬಂಧನವಾಗಿಹುದು

ಸಾನಿನಂಚಿನ

ನೋವಿನೊಳಗೆ...!

10) ಶಬ್ದಗಳು

ನಿಶ್ಶಬ್ಧವಾಗಿಹುದು

ಜಾತಿ-ಮತದ

ಬೇಲಿಯೊಳಗೆ...!

 

Comments (Click here to Expand)