varthabharthi

ವೈವಿಧ್ಯ

ಜಾತೀಯತೆಯ ವಿರುದ್ಧದ ಮಹಾ ವಿಜಯ

ವಾರ್ತಾ ಭಾರತಿ : 8 Jan, 2018
ಭಿಕ್ಕುಣಿ ಪೂರ್ಣಿಮಾ, ದಿಲ್ಲಿ

1857ರಲ್ಲಿ ಬ್ರಿಟಿಷರು ಭೀಮಾ ಕೋರೆಗಾಂವ್‌ನಲ್ಲಿ ಒಂದು ಸ್ಮಾರಕ ಸ್ತಂಭವನ್ನು ನಿರ್ಮಿಸಿದರು. ಅದರ ಮೇಲೆ ಯುದ್ಧದಲ್ಲಿ ಮಡಿದ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಮಡಿದ ಸೈನಿಕರ ಹೆಸರುಗಳಲ್ಲಿ ಹೆಚ್ಚಿನ, ಬಹುಪಾಲು ಹೆಸರುಗಳು ಮಹಾರರ ಹೆಸರುಗಳು. ಮಹಾರರ ದೀರ್ಘವಾದ ಮಿಲಿಟರಿ ಇತಿಹಾಸದ ಹೊರತಾಗಿಯೂ, 1893ರಲ್ಲಿ ಬ್ರಿಟಿಷ್ ಸರಕಾರ ಮಹಾರರನ್ನು ತನ್ನ ಸೇನೆಗೆ ನೇಮಕಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಿತು. ಇದು 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಭಾರತೀಯರ ದಂಗೆಯ ಪರಿಣಾಮವಾಗಿತ್ತು.

1818ರಲ್ಲಿ ಪೂನಾದ ಸಮೀಪ ಐದು ನೂರು ಮಹಾರ್ ಸೈನಿಕರು ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಹೋರಾಡಿ 25,000 ಸೈನಿಕರ ಬಲದ ಪೇಶ್ವೆ ಸೇನೆಯನ್ನು ಚದುರಿಸಿದರು.
ಹೊಸ ವರ್ಷ ಆಗಮಿಸಿದ ಒಂದುಗಂಟೆಯ ಬಳಿಕ, ಸೇನೆಯ ಇಬ್ಬರು ನಿವೃತ್ತ ಅಧಿಕಾರಿಗಳಾದ ಪಿ.ಎಸ್. ಧೋಬ್ಲೆ ಮತ್ತು ದಾದಾ ಸಾಹೇಬ್ ಭೋಸ್ಲೆ, ಮುಂಬೈಯ ದಾದರ್ ಪ್ರದೇಶದಲ್ಲಿರುವ ಬಿ . ಆರ್ ಅಂಬೇಡ್ಕರ್‌ರವರ ಸಮಾಧಿಯಿಂದ ಒಂದು ಬಸ್ಸಿನಲ್ಲಿ ಹೊರ ಟರು. ವಾಹನಗಳ ಸಾಲಿನಲ್ಲಿ ಅದರ ಜತೆ 300ಕ್ಕೂ ಹೆಚ್ಚು ಮಂದಿ ಸಮವಸ್ತ್ರ ಧರಿಸಿದ್ದ ಇತರ ಪುರುಷರು ಮತ್ತು ಮಹಿಳೆಯರಿದ್ದರು.
ಐದು ಗಂಟೆಗಳ ಬಳಿಕ ಅವರು ತಮ್ಮ ಗುರಿ ತಲುಪಿದರು: ಪೂನಾದ ಬಳಿ ಇರುವ ಭೀಮಾ ಕೋರೆಗಾಂವ್ ಎಂಬ ಹೆಸರಿನ ಒಂದು ದೊಡ್ಡ ಹಳ್ಳಿ. 1818ರಲ್ಲಿ ಬ್ರಿಟಿಷ್ ಧ್ವಜದ ಅಡಿಯಲ್ಲಿ ಮಹಾರ್ ಸೈನಿಕ ರ ಒಂದು ತಂಡ ಪೇಶ್ವೆಗಳ ಸೇನೆಯನ್ನು ಸೋಲಿಸಿದ್ದು ಇಲ್ಲೇ, ಭೀಮಾ ನದಿಯ ದಡದಲ್ಲೇ.
ಕೋವಿಹಿಡಿದ ಅಶ್ವಾರೋಹಿ ಸೈನಿಕರಿಂದ ಕೂಡಿದ್ದ 25,000 ಮಂದಿ ಸೈನಿಕ ಬಲದ ಬ್ರಿಟಿಷ್ ಸೇನೆಯನ್ನು 500 ಮಂದಿಯ ಮಹಾರ್ ಪದಾತಿ (ಕಾಲಾಳು) ಸೇನೆ ಹೇಗೆ ಸೋಲಿಸಿತೆಂಬುದನ್ನು ಭೋಸ್ಲೆ ಹೆಮ್ಮೆಯಿಂದ ವಿವರಿಸಿದರು: ‘‘ಮಹಾರರೇ ಪೇಶ್ವೆಗಳ ಆಳ್ವಿಕೆ ಯನ್ನು ಅಂತ್ಯಗೊಳಿಸಿ ಭಾರತವನ್ನು ಬ್ರಿಟಿಷರಿಗೆ ಕೊಟ್ಟದ್ದು.’’ಭೋಸ್ಲೆ 1965ರ ಯುದ್ಧದಲ್ಲಿ, ಶ್ರೀಲಂಕಾದಲ್ಲಿ, ಅಂಡಮಾನ್ ದ್ವೀಪಗಳಲ್ಲಿ ಮತ್ತು ಜಮ್ಮು ಹಾಗೂ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದಾರೆ.
ಕೋರೆಗಾಂವ್ ಯುದ್ಧ ಭಾರತದಲ್ಲಿ ಮಹಾರರಿಗೆ ಮತ್ತು ದಲಿತರಿಗೆ ತುಂಬ ಮಹತ್ವ ಪಡೆದಿರುವ ಘಟನೆ. ದಲಿತರು ಜನವರಿ 1ನೇ ತಾರೀಕನ್ನು ಪೇಶ್ವೆಗಳ ಅಮಾನವೀಯ ಆಡಳಿತದ ವಿರುದ್ಧ ತಾವು ಸಾಧಿಸಿದ ಗೆಲುವಿನ ಮತ್ತು ಇಂದಿಗೂ ನಡೆಯುತ್ತಿರುವ ಜಾತಿ-ಆಧಾರಿತ ದಮನದ ವಿರುದ್ಧ ತಾವು ನಡೆಸುತ್ತಿರುವ ಹೋರಾ ಟದ ಮೊದಲ ಹೆಜ್ಜೆ ಎಂದು ಪರಿಗಣಿಸುತ್ತಾರೆ.

ಸಾಹಸಪೂರ್ಣ ಸೋಲು

ಇತಿಹಾಸ ಹೇಳುವಂತೆ, 1818ರ ಹೊಸ ವರ್ಷದಂದು ಈಸ್ಟ್ ಇಂಡಿಯಾ ಕಂಪೆನಿಯ ಬಾಂಬೆ ನೇಟಿವ್ ಇನ್‌ಫಂಟ್ರಿ ರೆಜಿಮೆಂಟಿನ ಸುಮಾರು 500 ಮಂದಿ ಸೈನಿಕರು ಕರ್ನಲ್ ಎಫ್‌ಎಫ್ ಸ್ಟಾವ್‌ಂ ಟಿನ್‌ನ ನೇತೃತ್ವದಲ್ಲಿ ನಡೆದ ಭೀಮಾ ನದಿಯನ್ನು ದಾಟಿ, ಭೀಮಾ ಕೋರೆಗಾಂವ್‌ನಲ್ಲಿ ಸುಸಜ್ಜಿತವಾದ ಹಾಗೂ ತಮಗಿಂತ ತುಂಬ ಬಲಿಷ್ಠವಾದ ಪೇಶ್ವೆಯ 25,000 ಮಂದಿ ಸೈನಿಕರಿದ್ದ ಸೇನೆಯನ್ನು ಸೋಲಿಸಿದರು. ಇಲ್ಲಿ ಸಂಖ್ಯೆಗಳ ವಿಷಯದಲ್ಲಿ ಸ್ವಲ್ಪ ಉತ್ಪ್ರೇಕ್ಷೆ ಇರ ಬಹುದು. ಉದಾ: ಸಮಕಾಲೀನ ಬ್ರಿಟಿಷ್ ದಾಖಲೆಗಳು 500ರ ಬದಲು 900 ಮಹಾರ್ ಸೈನಿಕರು ಎನ್ನುತ್ತವೆ; 25,000ರ ಬದಲು 20,000 ಪೇಶ್ವೆ ಸೈನಿಕರು ಎನ್ನುತ್ತದೆ.
ಅದೇನೇ ಇದ್ದರೂ, ಆ ಕದನವು ಎರಡು ಅಸಮ ಸೇನೆಗಳ ನಡುವೆ ನಡೆದ ಕಾದಾಟವಾಗಿತ್ತು. ಬ್ರಿಟಿಷರು ಅದನ್ನು ತಮ್ಮ ಮೂರನೆಯ ಆಂಗ್ಲೋ-ಮರಾಠ ಯುದ್ಧದ ಮಹಾ ವಿಜಯ ಎಂದು ಪರಿಗಣಿಸಿದರು. ಯಾಕೆಂದರೆ ಆ ಕದನವು ಪೇಶ್ವೆ, ಬ್ರಿಟಿಷರಿಗೆ (ಈಸ್ಟ್ ಇಂಡಿಯಾ ಕಂಪೆನಿಗೆ) ತನ್ನ ಮರಾಠ ಸಾಮ್ರಾಜ್ಯವನ್ನು ಒಪ್ಪಿಸುವಂತೆ ಮಾಡಿತು. ಇದು ಪಶ್ಚಿಮ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ಅಡಿಪಾಯ ಹಾಕಿತು.
ಮೊದಲ ಮರಾಠಾ ದೊರೆ ಶಿವಾಜಿುು ತನ್ನ ಸೇನೆಗೆ ಮಹಾರರನ್ನು ಮುಕ್ತವಾಗಿ ನೇಮಕಾತಿ ಮಾಡಿಕೊಂಡಿದ್ದನಾದರೂ, ಎರಡು ಶತಮಾನಗಳ ಬಳಿಕ ಪೇಶ್ವೆದಳ ಆಡಳಿತದ ಕಾಲದಲ್ಲಿ ಮಹಾರರ ಸ್ಥಿತಿ, ಸ್ಥಾನಮಾನ ಹಿಂದೆಂದಿಗಿಂತಲೂ ಕೆಟ್ಟದಾಗಿತ್ತು;ಕೀಳಾಗಿತ್ತು. ಮಹಾರರು ಪೇಟೆ, ಪಟ್ಟಣಗಳನ್ನು ಪ್ರವೇಶಿಸುವಾಗ ತಮ್ಮ ಹೆಜ್ಜೆ ಯಿಂದ ಏಳುವ ಧೂಳನ್ನು ಗುಡಿಸಲಿಕ್ಕಾಗಿ ತಮ್ಮ ಬೆನ್ನ ಹಿಂದೆ ಕಸಬರಿಕೆ (ಹಿಡಿಸೂಡಿ)ಯನ್ನು ಕಟ್ಟಿಕೊಳ್ಳಬೇಕಾಗಿತ್ತು ಮತ್ತು ತಮ್ಮ ಉಗುಳನ್ನು ಸಂಗ್ರಹಿಸಲು ತಮ್ಮ ಕುತ್ತಿಗೆಯ ಎದುರು ಕುಡಿಕೆಗಳನ್ನು ಕಟ್ಟಿಕೊಳ್ಳಬೇಕಾಗಿತ್ತು. ಅಲ್ಲದೆ, ಓರ್ವ ತನ್ನ ಜಾತಿಯನ್ನು ಪ್ರಕಟಿಸದೆ ಅದನ್ನು ಗುಟ್ಟಾಗಿ ಇಡುವುದು ಒಂದು ಅಪರಾಧವಾಗಿತ್ತು.
ಬ್ರಿಟಿಷರು ಪೂನಾ ಸಮೀಪಿಸುತ್ತಿದ್ದಾರೆಂಬ ಸುದ್ದಿ ತಿಳಿದಾಗ ಮಹಾರರು ಎರಡನೆಯ ಪೇಶ್ವೆ ಬಾಜೀರಾವ್‌ಗೆ ತಮ್ಮ ಸೇವೆ ನೀಡಲು ಮುಂದಾದರೆಂದೂ, ಆತ ಅವರ ಕೊಡುಗೆಯನ್ನು ನಿರಾಕರಿಸಿ ದಾಗಷ್ಟೇ ಅವರು ಬ್ರಿಟಿಷರಿಗೆ ತವ್ಮು ನಿಷ್ಠೆಯನ್ನು ಪ್ರಕಟಿಸಿದರೆಂದೂ ಕೋರೆಗಾಂವ್ ಕದನದ ದಲಿತ ಕಥಾನಕ ಗಳು ಹೇಳುತ್ತವೆೆ.


1857ಲ್ಲಿ ಬ್ರಿಟಿಷರು ಭೀಮಾ ಕೋರೆಗಾಂವ್ನಲ್ಲಿ ಒಂದು ಸ್ಮಾರಕ ಸ್ತಂಭವನ್ನು ನಿರ್ಮಿಸಿದರು.ಅದರ ಮೇಲೆ ಯುದ್ಧದಲ್ಲಿ ಮಡಿದ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ. ಮಡಿದ ಸೈನಿಕರ ಹೆಸರುಗಳಲ್ಲಿ ಹೆಚ್ಚಿನ, ಬಹುಪಾಲು ಹೆಸರು ಗಳು ಮಹಾರರ ಹೆಸರುಗಳು.

ಮಹಾರರ ದೀರ್ಘವಾದ ಮಿಲಿಟರಿ ಇತಿಹಾಸದ ಹೊರತಾಗಿಯೂ, 1893ರಲ್ಲಿ ಬ್ರಿಟಿಷ್ ಸರಕಾರ ಮಹಾರರನ್ನು ತನ್ನ ಸೇನೆಗೆ ನೇಮಕಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಿತು. ಇದು 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಭಾರತೀಯರ ದಂಗೆಯ ಪರಿಣಾಮವಾಗಿತ್ತು. ಆ ಬಳಿಕ ಬ್ರಿಟಿಷರು ಕೇವಲ ‘ಸೇನಾ ಜನಾಂಗ’ಗಳಿಗೆ ಸೇರಿದವರನ್ನು ಮಾತ್ರ ತಮ್ಮ ಸೇನೆಗೆ ನೇಮಿಸಿಕೊಳ್ಳಲಾರಂಭಿಸಿದರು. ಸೇನೆಯಲ್ಲಿ ತವ್ಮು ಸ್ಥಾನ ವನ್ನು ಕಳೆದುಕೊಂಡಾಗ ಮಹಾರರು ಶಿಕ್ಷಣ ಪಡೆಯುವ ಒಂದು ಅವಕಾಶವನ್ನು ಹಾಗೂ, ಕನಿಷ್ಠ ಪಕ್ಷ ಕಾಗದ ಮೇಲಾದರೂ ತಾರತಮ್ಯ ರಹಿತವಾಗಿದ್ದ, ಒಂದು ಪರಿಸರದಲ್ಲಿ ಕೆಲಸ ಮಾಡುವ ಸವಲತ್ತನ್ನು ಕೂಡ ಕಳೆದುಕೊಂಡರು.
ಸ್ವತಃ ಭೀಮರಾವ್ ಅಂಬೇಡ್ಕರ್ ತನ್ನ ಬಾಲ್ಯವನ್ನು ಅಸ್ಪಶ್ಯತೆ ಯ ಹಿಂಸೆಯಿಂದ ರಕ್ಷಿಸಲ್ಪಟ್ಟ ಾತಾವರಣವಿದ್ದ ಒಂದು ಒಂದು ಮಿಲಿಟರಿ ಕಂಟೋನ್‌ಮೆಂಟ್‌ನಲ್ಲಿ, ಮಾಹೊವ್‌ನಲ್ಲಿ, ಕಳೆದರು. ಅಲ್ಲಿ ಅವರ ತಂದೆ, ಸುಬೇದಾರ್ ಮೇಜರ್ ರಾಮ್‌ಜಿ ಸಕ್‌ಪಾಲ್, ಸೇವೆ ಸಲಿಸುತ್ತಿದ್ದರು.
ಸಕ್‌ಪಾಲ್ ಅಲ್ಲಿ ಮಿಲಿಟರಿ ಶಾಲೆಯ ಮುಖ್ಯೋಪಾಧ್ಯಾಯ ರಾಗಿದ್ದರು. ಮಿಲಿಟರಿ ಸಿಬ್ಬಂದಿ ಹಾಗೂ ಅವರ ಸಂಬಂಧಿಕರಿಗೆ ಅಲ್ಲಿ ಶಿಕ್ಷಣ ದೊರಕುತ್ತಿತ್ತು. ಸಕ್‌ಪಾಲ್ 1894ರಲ್ಲಿ, ಬ್ರಿಟಿಷರು ಮಹಾರ ರನ್ನು ಸೇನೆಗೆ ಸೇರಿಸಿಕೊಳ್ಳುವುದನ್ನು ನಿಲ್ಲಿಸಿದ ಒಂದು ವರ್ಷದ ಬಳಿಕ, ನಿವೃತ್ತರಾದರು. ನಿವೃತ್ತಿಯ ಬಳಿ ಕೂಡ ಅವರು ಸೇನೆಗೆ ಮಹಾರರನ್ನು ಪುನಃ ಸೇರಿಸಿಕೊಳ್ಳಬೇಕೆಂದು ನಡೆದ ವಿವಿಧ ಪ್ರಚಾರಗಳಿಗೆ, ಬೇಡಿಕೆಗಳಿಗೆ ಬೆಂಬಲ ನೀಡಿದರು. 1927ರ ಜನವರಿ 1ರಂದು ಹಳ್ಳಿಯ ಹೊರಗೆ ಅಂಬೇಡ್ಕರ್ ಒಂದು ಸ್ಮರಣಾರ್ಥ ಸಭೆಯ ನೇತೃತ್ವ ವಹಿಸಿದರು. ಆ ವರ್ಷಾಚರಣೆ ಸಮಾರಂಭ ಇಂದಿಗೂ ಮುಂದುವರಿದಿದೆ: ಜನರು ಆ ಸ್ಮಾರಕ ಸ್ತಂಭದ ಬಳಿ ಬಂದು, ಅದರ ಬುಡದಲ್ಲಿ ಹೂಗ ಳನ್ನಿಡುತ್ತಾರೆ.
ಮೊದಲ ಮಹಾ ಯುದ್ಧದ ಸಮಯದಲ್ಲಿ ಬ್ರಿಟಿಷರು ಪುನಃ ಮಹಾರರನ್ನು ಸೇನೆಗೆ ನೇಮಿಸಿಕೊಳ್ಳಲಾರಂಭಿಸಿದರು. ಅಂತಿಮ ವಾಗಿ, 1945ರಲ್ಲಿ, ಮಹಾರ್ ರೆಜಿಮೆಂಟನ್ನು ಶಾಶ್ವತವಾಗಿ ಸುಧಾರಿಸಲಾಯಿತು. ಧೋಬ್ಲೆ ಮತ್ತು ಭೋಸ್ಲೆ ಇಬ್ಬರೂ ಕೂಡ ಆ ರೆಜಿಮೆಂಟಿನ ಸದಸ್ಯರು. ಪ್ರತಿವರ್ಷ, ಮಹಾರ್ ರೆಜಿಮೆಂಟಿನ ಸದಸ್ಯರು ತಮ್ಮ ಗೌರವ ಸಲ್ಲಿಸಲು ಸ್ಮಾರಕ ಸ್ತಂಭಕ್ಕೆ ಬರುತ್ತಾರೆ.

ಸೇನಾಧಿಕಾರಿಗಳಾದ ಧೋಬ್ಲೆ ಮತ್ತು ಭೋಸ್ಲೆ ಇಬ್ಬರು ಕೂಡ ನಿವೃತ್ತಿಯ ಬಳಿಕ ಸಮತಾ ಸೈನಿಕ ದಳದ ತರಬೇತುದಾರರು. ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾಕ್ಕೆ ಸೇರಿರುವ ಈ ಪ್ಯಾರಾ ಮಿಲಿಟರಿ ಸಂಘಟನೆಯನ್ನು, ಅಂಬೇಡ್ಕರ್‌ರವರು ಭಾಗಶಃ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹೆಚ್ಚಾಗುತ್ತಿದ್ದ ಹಿಂದೂಗಳ ಮಿಲಿಟರೀಕರಣಕ್ಕೆ ಪ್ರತಿಕ್ರಿಯೆಯಾಗಿ 1926ರಲ್ಲಿ ಸ್ಥಾಪಿಸಿದ್ದರು.

ಪ್ರತಿವರ್ಷ ಭೀಮಾ ಕೋರೆಗಾಂವ್‌ನಲ್ಲಿ ನಡೆಯುವ ಸಮಾರಂಭ ಗಳು ಈಗ ಒಂದು ಜಾತ್ರೆಯ ರೂಪ ಪಡೆದಿದೆ. ಅಲ್ಲದೆ ಅಲ್ಲಿರುವ ಸ್ಮಾರಕದಿಂದ ಸ್ಫೂರ್ತಿ ಪಡೆದ ಕನಿಷ್ಠ 15 ಮಂದಿ ಭಾರತೀಯ ಸೇನೆಗೆ ಸೇರಿದ್ದಾರೆ. ಅಲ್ಲಿ ನೆರೆಯುವ ದಲಿತರು ರಾತ್ರಿಯಿಡೀ ಸ್ಫೂರ್ತಿ ದಾಯಕ ಹಾಡುಗಳನ್ನು ಹಾಡುತ್ತಾರೆ. ಓರ್ವ ಬೌದ್ಧ ಸನ್ಯಾಸಿನಿ ಯಾಗಿರುವ ಬಿಕ್ಕುನಿ ಪೂರ್ಣಿಮಾ, ದೂರದ ದಿಲ್ಲಿಯಿಂದ ಕೋರೆಗಾಂವ್‌ನ ಸಮಾರಂಭಗಳಲ್ಲಿ ಭಾಗವಹಿಸಲು ಬಂದಿದ್ದಾರೆ: ‘‘ನಾನು ಶಾಂತಿಯಲ್ಲಿ ನಂಬಿಕೆಯಿರುವ ಓರ್ವ ಬೌದ್ಧ ಧರ್ಮೀ ಯಳು; ಆದರೆ ತಮ್ಮ ಸಮಾಜ ಮತ್ತು ಆತ್ಮ ಗೌರವಕ್ಕಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದವರಿಗೆ ಗೌರವ ಸೂಚಿಸಲು ನಾವು ಇಲ್ಲಿಗೆ ಬರುತ್ತೇವೆ’’ ಎಂದಿದ್ದಾರೆ ಅವರು.

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)