varthabharthi

ವೈವಿಧ್ಯ

ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ

ವಾರ್ತಾ ಭಾರತಿ : 8 Jan, 2018
Varthabharathi

ತುಮಕೂರು,ಜ.08: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರಿಂದ ತುಮಕೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಶಿವಕುಮಾರ್ ತಿಮ್ಲಾಪುರ ನೇತೃತ್ವದ ಕಾಂತರಾಜು ಕೌತಮಾರನಹಳ್ಳಿ ನಿರ್ದೇಶನದಲ್ಲಿ “ಸಿದ್ದಮಾದೇಶ” ನಾಟಕ ಪ್ರದರ್ಶನವನ್ನು ಏರ್ಪಡಿಲಾಗಿದ್ದು, ನಾಟಕದ ತಾಲೀಮಿನಲ್ಲಿ ತೊಡಗಿದ್ದ ತಂಡ ವಾರ್ತಾ ಇಲಾಖೆಯ ಆವರಣವನ್ನು ಸ್ವಚ್ಚಗೊಳಿಸುವ ಮೂಲಕ ಪರಿಸರ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿದರು. 

ಸ್ವಚ್ಛತ ಅಭಿಯಾನವನ್ನು ಪಾಲಿಸುವ ನಿಟ್ಟಿನಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದಿಂದ ಪ್ರತಿ ಬಾರಿ ನಾಟಕ ಪ್ರದರ್ಶನದ ದಿನದಂದು ಆಯಾ ನಗರದಲ್ಲಿ ಸ್ವಚ್ಛತೆಯನ್ನು ಮಾಡಿ ಜನರಿಗೆ ಅದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬರುತ್ತಿದೆ ಎಂದು ಶಿವ ಕುಮಾರ್ ತಿಮ್ಲಾಪುರ ತಿಳಿಸಿದರು. 

ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಂದವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಬೇಕು. ಆಗಲೇ ಸುಂದರ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕಲಾ ತಂಡದ ವತಿಯಿಂದ ಪ್ರತಿಬಾರಿಯೂ ಎಲ್ಲೆಡೆಯು ಸ್ವಚ್ಛತೆ-ಎಲ್ಲರಿಗೂ ಆರೋಗ್ಯ ಎಂಬ ದ್ಯೇಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಗುರಿಯನ್ನಾಗಿ ಇಟ್ಟುಕೊಂಡಿದ್ದೇವೆ ಎಂದು ಕಾಂತರಾಜು ಕೌತಮಾರನಹಳ್ಳಿ ತಿಳಿಸಿದರು. 

ಸ್ವಚ್ಚತೆಯ ಸಂದರ್ಭದಲ್ಲಿ ಕಲಾವಿದರಾದ ಸಿದ್ದರಾಜು, ಅಪೂರ್ಣ, ನಿಜಲಿಂಗಪ್ಪ, ದಲಿತ್ ರವಿಕುಮಾರ್, ಮೋಹನ್ ಎಚ್.ಆರ್.,ಚಂದ್ರು, ರಘುನಾಥ, ನವೀನ್‍ಕುಮಾರ್, ದರ್ಶನ್, ಹರ್ಷ, ತ್ರಿಲೇಶ, ಅಭಿಷೇಕ, ಜಯಣ್ಣ, ಚೆಲವರಾಜು, ನವೀನ್‍ಕುಮಾರ್ ಗುಬ್ಬಿ ಭಾಗವಹಿಸಿದ್ದರು. 

 

Comments (Click here to Expand)