varthabharthi

ಕ್ರೀಡೆ

ಡಬ್ಲ್ಯುಟಿಎ ರ್ಯಾಂಕಿಂಗ್

ದ್ವಿತೀಯ ಸ್ಥಾನಕ್ಕೇರಿದ ವೋಝ್ನಿಯಾಕಿ

ವಾರ್ತಾ ಭಾರತಿ : 9 Jan, 2018

ಪ್ಯಾರಿಸ್, ಜ.8: ಡೆನ್ಮಾರ್ಕ್ ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಸೋಮವಾರ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಕಳೆದ ವಾರ ಆಕ್ಲ್ಲೆಂಡ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದ 27ರ ಹರೆಯದ ವೋಝ್ನಿಯಾಕಿ ಆರು ವರ್ಷಗಳ ನಂತರ ಗರಿಷ್ಠ ರ್ಯಾಂಕ್ ತಲುಪಿದ್ದಾರೆ. 2012ರಲ್ಲಿ ಕಳಪೆ ಪ್ರದರ್ಶನ ನೀಡಿ ನಂ.1 ಸ್ಥಾನ ಕಳೆದುಕೊಂಡಿದ್ದರು.

ಬ್ರಿಸ್ಬೇನ್ ಟೆನಿಸ್ ಟೂರ್ನಿ ಜಯಿಸಿರುವ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 4ನೇ ಸ್ಥಾನಕ್ಕೆ ವಾಪಸಾಗಿದ್ದಾರೆ. ಆಕ್ಲಂಡ್ ಫೈನಲ್‌ನಲ್ಲಿ ವೋಝ್ನಿಯಾಕಿಗೆ ಶಾಕ್ ನೀಡಿರುವ ಜರ್ಮನಿಯ ಜುಲಿಯಾ ಜಾರ್ಜೆಸ್ 2 ಸ್ಥಾನ ಭಡ್ತಿ ಪಡೆದು 12ನೇ ಸ್ಥಾನಕ್ಕೇರಿದ್ದಾರೆ.

ಮುಂದಿನ ವಾರ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ಗಿಂತ ಮೊದಲು ರೊಮಾನಿಯದ ಸಿಮೊನಾ ಹಾಲೆಪ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

 ರ್ಯಾಂಕಿಂಗ್: 1. ಸಿಮೊನಾ ಹಾಲೆಪ್(ರೋಮಾನಿಯ), 2. ಕರೊಲಿನ್ ವೋಝ್ನಿಯಾಕಿ(ಡೆನ್ಮಾರ್ಕ್), 3.ಗಾರ್ಬೈನ್ ಮುಗುರುಝ (ಸ್ಪೇನ್), 4. ಎಲಿನಾ ಸ್ವಿಟೋಲಿನಾ(ಉಕ್ರೇನ್), 5. ವೀನಸ್ ವಿಲಿಯಮ್ ್ಸ (ಅಮೆರಿಕ), 6.ಕರೊಲಿನಾ ಪ್ಲಿಸ್ಕೋವಾ(ಝೆಕ್), 7. ಜೆಲೆನಾ ಒಸ್ಟಾಪೆಂಕೊ(ಲಾಟ್ವಿಯ), 8. ಕರೊಲಿನ್ ಗಾರ್ಸಿಯಾ(ಫ್ರಾನ್ಸ್), 9. ಜೊಹನ್ನಾ ಕಾಂಟಾ(ಬ್ರಿಟನ್),10. ಕೊಕೊ ವಾಂಡ್‌ವೆಘ್(ಅಮೆರಿಕ).

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)