varthabharthi

ನಿಮ್ಮ ಅಂಕಣ

ಹಕ್ಕಿ ಜ್ವರದ ಬಗ್ಗೆ ಜಾಗೃತಿ ಮೂಡಿಸಿ

ವಾರ್ತಾ ಭಾರತಿ : 10 Jan, 2018
-ನಿರ್ಮಲಾ ಟಿ. ಲಕ್ಕಿಹಳ್ಳಿ, ಹೊಸದುರ್ಗ

ಮಾನ್ಯರೇ,

ಇತ್ತೀಚೆಗೆ ಮಾರಕ ಹಕ್ಕಿ ಜ್ವರ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ. ಈ ಮಾರಕ ರೋಗ ಕೋಳಿಗಳ ಮೂಲಕ ಮನುಷ್ಯರಿಗೂ ಹರಡುವ ಸಾಧ್ಯತೆ ಹೆಚ್ಚುತ್ತಿವೆ. ನಗರದ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿಯಿದ್ದರೂ ಹಳ್ಳಿಗಳಲ್ಲಿ ಮಾಹಿತಿ ಇರುವುದಿಲ್ಲ. ಹಾಗಾಗಿ ಈ ರೋಗ ಎಲ್ಲಡೆ ಹರಡುವ ಸಾಧ್ಯತೆ ಇದೆ.

ಬೆಂಗಳೂರು ಮುಂತಾದ ನಗರಗಳಲ್ಲಿ ಕೋಳಿಗಳಿಗೆ ಹಕ್ಕಿ ಜ್ವರದ ಸೋಂಕು ತಗುಲಿದ ಸುದ್ದಿಯಿಂದಾಗಿ ಕುಕ್ಕುಟೋದ್ಯಮ ತತ್ತರಿಸುತ್ತಿದೆ. ಹೆಚ್ಚಿನ ಕಡೆ ಕೋಳಿಯ ಬೆಲೆ ಕೆಜಿಗೆ ರೂ. 150 ಇದ್ದ್ದದ್ದು 90, 100ಕ್ಕೆ ಇಳಕೆಯಾಗಿದೆ. ಒಂದೊಮ್ಮೆ ಬೆಲೆ ಕಡಿಮೆಯೆಂದು ಹಳ್ಳಿ ಜನರು ಸೋಂಕಿರುವ ಕೋಳಿಗಳನ್ನು ತಿಂದರೆ ಈ ರೋಗಕ್ಕೆ ಬಲಿಯಾಗುವುದು ಖಂಡಿತ.

ಆದ್ದರಿಂದ ಈ ರೋಗ ವ್ಯಾಪಕವಾಗಿ ಹರಡುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಹಳ್ಳಿಗಳಿಗೆ ಈ ರೋಗದ ಬಗ್ಗೆ ಮಾಹಿತಿ ತಲುಪಿಸಬೇಕು. ಪಶುಸಂಗೋಪನೆ ಇಲಾಖೆ ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿಕೊಂಡು, ವಿಶೇಷ ತಂಡವನ್ನು ನೇಮಿಸಿ ಎಲ್ಲಾ ಕಡೆಯಲ್ಲೂ ಮಾಹಿತಿ ನೀಡಬೇಕು. 2016ರಲ್ಲಿ ಹಕ್ಕಿ ಜ್ವರದ ಕಾರಣದಿಂದ ಇಡೀ ಮೈಸೂರು ಮೃಗಾಲಯವನ್ನೇ ಬಂದ್ ಮಾಡಲಾಗಿತ್ತು, ಅಂತಹ ಪರಿಸ್ಥಿತಿ ಎದುರಾಗದಂತೆ ಮರುಕಳಿಸದಂತೆ ಪಶುಸಂಗೋಪನೆ ಇಲಾಖೆ ಶೀಘ್ರದಲ್ಲೇ ಕ್ರಮ ಕೈಗೊಂಡು ಜನರ ಆತಂಕವನ್ನು ನಿವಾರಿಸಬೇಕು.

 -ನಿರ್ಮಲಾ ಟಿ. ಲಕ್ಕಿಹಳ್ಳಿ, ಹೊಸದುರ್ಗ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)