ಎರಡನೇ ಟೆಸ್ಟ್ ಗೆ ಆಫ್ರಿಕ ತಂಡದಲ್ಲಿ ಒಲಿವಿಯರ್, ನಗಿಡಿಗೆ ಸ್ಥಾನ
ಕೇಪ್ಟೌನ್, ಜ.9: ಸೆಂಚೂರಿಯನ್ನಲ್ಲಿ ಶನಿವಾರ ಆರಂಭಗೊಳ್ಳಲಿರುವ ಭಾರತ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಗೆ ದಕ್ಷಿಣ ಆಫ್ರಿಕ ತಂಡದಲ್ಲಿ ವೇಗದ ಬೌಲರ್ಗಳಾದ ಡ್ವೇನ್ ಒಲಿವಿಯರ್ ಮತ್ತು ಲುಂಗಿ ನಗಿಡಿ ಸ್ಥಾನ ಪಡೆದಿದ್ದಾರೆ.
25ರ ಹರೆಯದ ಒಲಿವಿಯರ್ ಅವರು ದಕ್ಷಿಣ ಆಫ್ರಿಕದ ಪರ ಐದು ಟೆಸ್ಟ್ಗಳನ್ನು ಆಡಿದ್ದಾರೆ. 21ರ ಹರೆಯದ ನಗಿಡಿ ಅವರು ದಕ್ಷಿಣ ಆಫ್ರಿಕದ ಓರ್ವ ಭರವಸೆಯ ಯುವ ಬೌಲರ್ ಎನಿಸಿಕೊಂಡಿದ್ದಾರೆ.
ಡೇಲ್ ಸ್ಟೇಯ್ನ ಗಾಯಗೊಂಡು ಸರಣಿಯಿಂದ ದೂರ ಉಳಿದಿರುವ ಹಿನ್ನೆಲೆಯಲ್ಲಿ ಇಬ್ಬರು ಬೌಲರ್ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕ ನ್ಯೂಲ್ಯಾಂಡ್ಸ್ನಲ್ಲಿ ಮೊದಲ ಟೆಸ್ಟ್ನಲ್ಲಿ ಭಾರತದ ವಿರುದ್ಧ 72 ರನ್ಗಳ ರೋಚಕ ಜಯ ಗಳಿಸಿತ್ತು.
ದಕ್ಷಿಣ ಆಫ್ರಿಕ ತಂಡ: ಎಫ್ಡು ಪ್ಲೆಸಿಸ್(ನಾಯಕ), ಹಾಸಿಮ್ ಅಮ್ಲ, ತೆಂಬಾ ಬಾವುಮಾ, ಥೆವುನಿಸ್ ಡಿ ಬ್ರುನ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಎಬಿ ಡಿವಿಲಿಯರ್ಸ್, ಡೀನ್ ಎಲ್ಗರ್, ಕೇಶವ್ ಮಹಾರಾಜ್, ಏಡೆನ್ ಮಾರ್ಕರಮ್, ಮೊರ್ನೆ ಮೊರ್ಕೆಲ್, ಕ್ರಿಸ್ ಮೊರೀಸ್, ಲುಂಗಿ ನಗಿಡಿ,ಡ್ವೇನ್ ಒಲಿವಿಯರ್, ಅಂಡ್ಲೆ ಫೆಹ್ಲುಕ್ವಾಹೊ, ವೆರ್ನಾನ್ ಫಿಲ್ಯಾಂಡರ್, ಕಾಗಿಸೊ ರಬಾಡ.