varthabharthi

ಕ್ರೀಡೆ

ಕಿವೀಸ್ ತಂಡಕ್ಕೆ ಕಾಲಿನ್ ವಾಪಸ್

ವಾರ್ತಾ ಭಾರತಿ : 10 Jan, 2018
Varthabharathi

ನೆಲ್ಸನ್, ಜ.9: ನ್ಯೂಝಿಲೆಂಡ್‌ನ ಆಲ್‌ರೌಂಡರ್ ಕಾಲಿನ್ ಗ್ರಾಂಡ್‌ಹೊಮ್ಮೆ ಅವರು ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯಕ್ಕೆ ನ್ಯೂಝಿಲೆಂಡ್ ತಂಡಕ್ಕೆ ವಾಪಸಾಗಿದ್ದಾರೆ.

ಕಾಲಿನ್ ಅವರು ತಂದೆ ನಿಧನರಾದ ಹಿನ್ನೆಲೆಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಿರಲಿಲ್ಲ.

 ಇದೀಗ ಜಾರ್ಜ್ ವೊರ್ಕೆರ್ ಅವರ ಸ್ಥಾನಕ್ಕೆ ಕಾಲಿನ್ ವಾಪಸಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ನ್ಯೂಝಿಲೆಂಡ್ 2 ಪಂದ್ಯಗಳಲ್ಲಿ ಜಯ ಗಳಿಸಿ ಸರಣಿ ಗೆಲುವಿನತ್ತ ನೋಡುತ್ತಿದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ನ್ಯೂಝಿಲೆಂಡ್ ಜಯ ಗಳಿಸಿದರೆ ಇನ್ನೂ 2 ಪಂದ್ಯಗಳು ಬಾಕಿ ಇರುವಾಗಲೇ ಐದು ಪಂದ್ಯಗಳ ಸರಣಿಯನ್ನು ನ್ಯೂಝಿಲೆಂಡ್ ವಶಪಡಿಸಿಕೊಳ್ಳಲಿದೆ.

ಆಲ್‌ರೌಂಡರ್ ಕಾಲಿನ್ ಅವರು ನ್ಯೂಝಿಲೆಂಡ್ ಪರ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 35.66 ಸರಾಸರಿಯಂತೆ 214 ರನ್ ಮತ್ತು 8 ವಿಕೆಟ್ ಪಡೆದಿದ್ದಾರೆ.

 

Comments (Click here to Expand)